ಮಹಾ ಸಚಿವರ ವಿರುದ್ಧ ಕ್ರಮಕ್ಕೆ; ಅಧ್ಯಕ್ಷ ಮಹಾದೇವ ತಳವಾರ ಆಗ್ರಹ

IMG-20250128-WA0035.jpg
Published on
ಬೆಳಗಾವಿ: ನಗರದ ಅನಗೋಳದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವೇಳೆ ಜೈ ಮಹಾರಾಷ್ಟç ಎಂದು ಕೂಗಿದ ಮಹಾರಾಷ್ಟç ಸಚಿವ ಶಿವೇಂದ್ರಸಿAಹರಾಜೆ ಭೋಸಲೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾಗಿದ್ದು, ದೂರು ಸ್ವೀಕರಿಸದೇ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ಕಿತ್ತೂರು ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಮಹಾದೇವ ತಳವಾರ ಕಿಡಿಕಾರಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈ ಮಹಾರಾಷ್ಟç ಕೂಗಿರುವ ಬಗ್ಗೆ ಸೂಕ್ತ ದಖಲೆಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ವಿಡಿಯೋ ತುಣುಕುಗಳು, ಪತ್ರಿಕಾ ವರದಿಗಳ ಸಮೇತ ಠಾಣೆಗೆ ನೀಡಲಾಗಿದೆ.ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ. ನ್ಯಾಯಾಲಯ ವ್ಯಾಪ್ತಿಗೆ ಒಳ್ಳಪಟ್ಟಿದೆ ಎಂದು ಪತ್ರ ಬರೆದು ಕೈ ಕಟ್ಟಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಪೊಲೀಸ್ ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲಾಡಳಿತ ಪರವಾನಗಿ ಇಲ್ಲದಿದ್ದರೂ ಶಿಷ್ಟಾಚಾರ ಉಲ್ಲಂಘಿಸಿ ಮಹಾರಾಷ್ಟçದ ಸಚಿವರನ್ನು ಕರೆ ತಂದು ಕನ್ನಡ ನೆಲದಲ್ಲಿ ಜೈ ಮಹಾರಾಷ್ಟç ಘೋಷಣೆ ಕೂಗಿದಾಗ ಶಾಸಕ ಅಭಯ ಪಾಟೀಲ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಶಾಸಕ ಅಭಯ ಪಾಟೀಲ ಧೈರ್ಯ ಇದ್ದರೆ ಮಹಾರಾಷ್ಟ್ರಕ್ಕೆ ಹೋಗಿ ಜೈ ಕರ್ನಾಟಕ ಎಂದು ಘೋಷಣೆ ಕೂಗಲಿ ಎಂದು ಸವಾಲು ಹಾಕಿದರು.
ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡಿರುವ ಬಗ್ಗೆ ಪೊಲೀಸರ ಗಮನಕ್ಕೆ ಬಂದಿಲ್ಲವೇ? ಪೊಲೀಸ್ ಠಾಣಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಕನ್ನಡಿಗರ ಬಗ್ಗೆ ಗೌರವ ಇಲ್ಲವೇ? ನಮ್ಮ ಭಾವನೆಗೆ ಧಶಕ್ಕೆಯಾದರೆ ಏಕೆ ಸುಮ್ಮನೇ ಕುಳಿತಿದಿದ್ದಾರೆ. ನಾವು ಸುಮ್ಮನೆ ಕುಳಿತುಕೊಳ್ಳದೇ ಕಾನೂನು ತಜ್ಞರ ಸಲಹೆ ಪಡೆದು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದರು.
ಕನ್ನಡ ನಾಡು, ನುಡಿ, ನೆಲ, ಜಲ ಬಗ್ಗೆ ಕನ್ನಡ ಸಂಘಟನೆಗಳು ಹೋರಾಟ ನಡೆಸಿದಾಗ ಪೊಲೀಸರು ದೂರು ದಆಖಲಿಸುತ್ತಾರೆ. ಆದರೆ ಕನ್ನಡಿಗರ ವಿರುದ್ಧ ಮಾತನಾಡಿದವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರರ ಕಸ್ತೂರಿ ಬಾವಿ, ಸುರೇಶ ಖಿರಾಯಿ, ಪ್ರೇಮ ಕೋಲಕಾರ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net