ನಗರದಲ್ಲಿ ಎರಡು ಕೃತಿ ಬಿಡುಗಡೆ: ಹಿಂದಿ ಭವನದಲ್ಲಿ ಕಾರ್ಯಕ್ರಮ ಆಯೋಜನೆ

24_10_Mdy_02(Kruthi Bidugage)
Published on

ಮಂಡ್ಯ: ನಗರದ ಪ್ರೇಮ್‌ಚಂದ್ ಹಿಂದಿಭವನದಲ್ಲಿ ಚಿರಂತ ಪ್ರಕಾಶನ ಮಂಡ್ಯದ ವತಿಯಿಂದ ಲೇಖಕಿ ಡಾ.ಸುಮಾರಾಣಿ ಶಂಭು ಅವರ ಆಧುನಿಕ ಮಹಿಳಾಕಾವ್ಯ-ಪುರಾಣ ಸ್ತ್ರೀ ದರ್ಶನ ಹಾಗೂ ಸಿಗ್ನೇಚರ್-ಲಲಿತ ಪ್ರಬಂಧಗಳ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ವಿಶ್ರಾಂತ ಪ್ರಾಂಶುಪಾಲ ಪ್ರೊ.ಜಿ.ಟಿ.ವೀರಪ್ಪ ಮಾತನಾಡಿ, ಆಧುನಿಕ ಮಹಿಳಾಕಾವ್ಯ- ಪುರಾಣ ಸ್ತ್ರೀ ದರ್ಶನ ಸಾಹಿತ್ಯಾಭ್ಯಾಸಿಗಳಿಗೆ ಉತ್ತಮ ಗ್ರಂಥವಾಗಲಿದೆ. ಲೇಖಕಿ ಕೂಲಂಕಷವಾಗಿ ಸಮಗ್ರ ಅಧ್ಯಯನ ನಡೆಸಿ ಈ ಕೃತಿ ಹೊರತಂದಿರುವುದು ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.

ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಸ್.ಬಿ.ಶಂಕರಗೌಡ ಮಾತನಾಡಿ, ಲೇಖಕರು ಸಮಾಜವನ್ನು ನಾಜೂಕಾಗಿ ಮೊನಚು ಮಾತುಗಳಿಂದ ತಿದ್ದುವ ಕಾರ್ಯ ಮಾಡಬೇಕಾಗುತ್ತದೆ. ಸುಮಾರಾಣಿ ಅವರಿಗೆ ವಿಮರ್ಶೆ, ವಿಡಂಬನಾ ಶೈಲಿ ಕೈಗೊಗ್ಗಿದೆ. ಲಲಿತ ಪ್ರಬಂಧಗಳಲ್ಲಿರುವ ಮೊನಚು ಮಾತುಗಳು ಗಂಭೀರತೆಯ ಕಡೆ ದೃಷ್ಟಿ ಹಾಯುವಂತೆ ಪ್ರೇರೇಪಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಎರಡೂ ಕೃತಿಗಳು ಮೌಲಿಕವಾದದ್ದಾಗಿದೆ. ಒಮ್ಮೆ ಓದಲು ತೊಡಗಿದರೆ ಮತ್ತೆ ಮತ್ತೆ ತಿರುವಿ ಹಾಕಬೇಕೆಂದೆನಿಸುತ್ತದೆ. ಪ್ರತಿಭಾವಂತರಾದ ಸುಮಾ ಅವರಿಂದ ಮತ್ತಷ್ಟು ಕೃತಿಗಳು ಹೊರಹೊಮ್ಮಲಿ ಎಂದು ಆಶಿಸಿದರು.

ಲೇಖಕಿ ಡಾ.ಸುಮಾರಾಣಿ ಶಂಭು. ಕಬ್ಬನಹಳ್ಳಿ ಶಂಭು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net