ಕೃಷಿ ಮೇಳ| ಬಾಳೆಹಣ್ಣು ಮುದ್ದೆ ಗುಳುಂನಲ್ಲೂ ಪರಾಕ್ರಮ

Banana
Published on

26 ಸೆಕೆಂಡ್​ನಲ್ಲಿ 3 ಪಚ್ಚಬಾಳೆ ಹಣ್ಣುಗಳನ್ನು ಗುಳುಂ ಎನಿಸಿ ಮೊದಲಿಗರಾದ ಪಾಂಡವಪುರ ತಾಪಂ ಅಧ್ಯಕ್ಷೆ ಗಾಯತ್ರಿ ಕಾಂತರಾಜು, ಅರ್ಧ ಕೆ.ಜಿ. ರಾಗಿಮುದ್ದೆ ತಿನ್ನುವ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದು ಗಮನ ಸೆಳೆದರು.

ಕೃಷಿ ಮೇಳದ ಕೊನೆಯ ದಿನವಾದ ಭಾನುವಾರ ರಾಗಿಮುದ್ದೆ, ಬಾಳೆಹಣ್ಣು ತಿನ್ನುವ ಸ್ಪರ್ಧೆಯನ್ನು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. 30 ಸೆಕೆಂಡ್​ನಲ್ಲಿ 5 ಬಾಳೆಹಣ್ಣುಗಳು ಸ್ವಾಹ ಮಾಡಿ ಪ್ರಥಮ ಸ್ಥಾನ ಪಡೆದ ಚಿತ್ರದುರ್ಗ ಜಿಲ್ಲೆಯ ರೈತ ಪಿ.ಬಿ.ಶಿವಲಿಂಗಸ್ವಾಮಿ, ರಾಗಿಮುದ್ದೆ ತಿನ್ನುವ ಸ್ಪರ್ಧೆಯಲ್ಲೂ ದ್ವಿತೀಯ ಸ್ಥಾನ ಪಡೆದು ಸೈ ಎನಿಸಿಕೊಂಡರು.

ಮಂಡ್ಯ ಜಿಲ್ಲೆಯ ರೈತ ಜಿ.ಆರ್.ಯೋಗೇಶ್, ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ನೆರೆದಿದ್ದವರು ಹುಬ್ಬೇರುವಂತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net