ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು: ಓರ್ವನ ಸ್ಥಿತಿ ಗಂಭೀರ

Death In Water 31 Dec 19
Published on

ವಿಜಯಪುರ : ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ 5 ಮಂದಿ ಬಾಲಕರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಢವಳಗಿ ಗ್ರಾಮದ ಸಿದ್ದರಾಮಪ್ಪ ಬಿರಾದಾರ (11) ಹಾಗೂ ಅಮಿತ್ ಟಕ್ಕಳಕಿ (12) ಮೃತ ಬಾಲಕರು. ನೀರಿನಲ್ಲಿ ಮುಳುಗಿ ಉಸಿರುಗಟ್ಟಿರುವ ವೀರೇಶ ಟಕ್ಕಳಕಿ ಬಾಲಕನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಹೊರ ಭಾಗದ ಜಮೀನಿನಲ್ಲಿ ಕುಮಾರಪ್ಪ ಕೋರಿ ಎಂಬ ರೈತ ಕೃಷಿ ಹೊಂಡ ನಿರ್ಮಿಸಿದ್ದರು. ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ 5 ಮಂದಿ ಬಾಲಕರು ಈಜಲು ಕೃಷಿ ಹೊಂಡಕ್ಕೆ ಇಳಿದಿದ್ದರು. ಸಿದ್ದರಾಮಪ್ಪ ಬಿರಾದಾರ, ಅಮಿತ್​ ಟಕ್ಕಳಕಿ ಹಾಗೂ ವಿರೇಶ ಟಕ್ಕಳಕಿ ನೀರಿನಲ್ಲಿ ಮುಳುಗುತ್ತಿದ್ದರು. ಜತೆಯಲ್ಲಿ ಇದ್ದ ಬಾಲಕರು ವಿರೇಶ ಟಕ್ಕಳಕಿಯನ್ನು ರಕ್ಷಿಸಿದರು. ಸಿದ್ದರಾಮಪ್ಪ ಹಾಗೂ ಅಮಿತ್​ ನೀರಿನಲ್ಲಿ ಮುಳುಗಿ ಮೃತಪಟ್ಟರು. ಸ್ಥಳೀಯರು ಬಂದು ಬಾಲಕರ ಶವವನ್ನು ಮೇಲಕ್ಕೆ ಎತ್ತಿದರು. ಮುದ್ದೇಬಿಹಾಳ ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net