

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರೈತರ ನೀರಾವರಿ ಕನಸಿಗೆ ಪೂರಕವಾಗಿರುವ ಕೃಷಿಹೊಂಡ ನಿರ್ಮಾಣ ಕಾರ್ಯವನ್ನು ಸರಳೀಕರಣಗೊಳಿಸಿರುವ ಸರ್ಕಾರ ಕೃಷಿಭಾಗ್ಯ ಯೋಜನೆ ಅನುಷ್ಟಾನಕ್ಕೆ ಒತ್ತು ನೀಡಿದೆ.
ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಕೃಷಿಹೊಂಡ ನಿರ್ಮಾಣಕ್ಕೆ ಅಸಕ್ತಿ ತೋರಿಸಿದ್ದು, ಕೃಷಿ ಇಲಾಖೆಗೆ ನೂರಾರು ಅರ್ಜಿಗಳು ಸಲ್ಲಿಕೆಯಾಗಿವೆ.
ಯಾವುದೇ ನದಿಮೂಲವಿಲ್ಲದ ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ನೀರು ಸಂಗ್ರಹ ಹಾಗೂ ಬೊರ್‌ವೆಲ್‌ಗಳ ನೀರಿನ ಶೇಕರಣೆಗೆ ಅತ್ಯಗತ್ಯವೆನಿಸಿರುವ ಕೃಷಿಹೊಂಡ ನಿರ್ಮಾಣದ ಬಗ್ಗೆ ಜಿಲ್ಲಾಡಳಿತ ಹೆಚ್ಚೆಚ್ಚು ಪ್ರಚಾರ ನಡೆಸುತ್ತಿದ್ದು ರೈತರೂ ಕೃಷಿಹೊಂಡ ನಿರ್ಮಾಣಕ್ಕೆ ಒಲವು ತೋರಿಸುತ್ತಿದ್ದಾರೆ.
ಇಲಾಖೆಯಿಂದ ಸಹಾಯಧನ: ಸಾಮಾನ್ಯ ವರ್ಗದವರಿಗೆ ಶೇ.80 ಹಾಗೂ ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರಿಗೆ ಶೇ.90 ಸಹಾಯಧನದ ನೆರವು ಸಿಗಲಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಕೃಷಿ ಹೊಂಡ ನಿರ್ಮಾಣ, ಟಾರ್ಪಾಲಿನ್ ಹಾಸುವುದು, ೆನ್ಸಿಂಗ್ ಹಾಕುವುದು, ಡೀಸೆಲ್ ಮೋಟಾರ್ ಖರೀದಿ ಸೇರಿ ತುಂತುರು ಹನಿ ಅಳವಡಿಸಿಕೊಳ್ಳಲು ಈ ಯೋಜನೆಯಡಿ ಇದೇ ಅನುಪಾತದಲ್ಲಿ ಸಹಾಯಧನ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1 ಎಕರೆ ಜಮೀನು ಇರಬೇಕು: ಈ ಯೋಜನೆಯಡಿ ಕನಿಷ್ಟ 1 ಎಕರೆ ಜಮೀನು ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು, ಕೆಲವು ಸಂದರ್ಭಗಳಲ್ಲಿ ಅರ್ಧ ಎಕರೆ ಜಮೀನಿನ ಮಾಲೀಕರು ಇದರ ಲಾನುಭವಿಗಳಾಗಲು ಅವಕಾಶವಿದೆ ಎಂದು ಇಲಾಖೆ ತಿಳಿಸಿದೆ. ಇದರ ಜತೆಗೆ ಜಮೀನಿನ ಪಹಣಿ, ಆಧಾರ್‌ಕಾರ್ಡ್, ಆಧಾರ್‌ಲಿಂಕ್ ಅಗಿರುವ ಬ್ಯಾಂಕ್ ಪಾಸ್‌ಪುಸ್ತಕ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬಹುದು, ಹೋಬಳಿ ಮಟ್ಟದಲ್ಲಾದರೆ ಸ್ಥಳೀಯ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು, ತಾಲೂಕು ಮಟ್ಟದಲ್ಲಿ ಕೃಷಿ ಇಲಾಖೆಗೆ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಎರಡು ಹಂತದಲ್ಲಿ ಹಣ ಬಿಡುಗಡೆ: ಅರ್ಜಿ ಸಲ್ಲಿಸಿದ ಬಳಿಕ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ, ಗುರುತಿಸಿದ ಜಾಗದಲ್ಲಿ ಮೊದಲು ರೈತರೇ ಸ್ವತಃ ಕೃಷಿಹೊಂಡ ನಿರ್ಮಾಣಕ್ಕೆ ಹಣ ವಿನಿಯೋಗಿಸಬೇಕು, ಕೃಷಿ ಹೊಂಡ ನಿರ್ಮಾಣವನ್ನು ಪರಿಶೀಲಿಸಿದ ಬಳಿಕ ಶೇ.75 ಹಣ ಪಾವತಿಯಾಗಲಿದೆ ನಂತರದಲ್ಲಿ ಟಾರ್ಪಾಲಿನ್ ಹೊದಿಕೆ ಹಾಗೂ ಡೀಸೆಲ್ ಪಂಪ್ ಖರೀದಿ ಹಾಗೂ ತಂತಿಬೇಲಿ ನಿರ್ಮಾಣದ ಬಳಿಕ ಉಳಿದ ಶೇ.25 ಹಣವನ್ನು ಲಾನುಭವಿಗಳಿಗೆ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲಾಖೆಯಿಂದ ಅಂದಾಜು ಪಟ್ಟಿ: ಕೃಷಿ ಹೊಂಡ ನಿರ್ಮಾಣಕ್ಕೆ ಕೆಲವೊಂದು ನಿಯಮಗಳಿವೆ, ಅದರಂತೆ ಅಳತೆಯ ಆಧಾರದ ಮೇಲೆ ಇಷ್ಟಿಷ್ಟು ಅನುದಾನ ಬಿಡುಗಡೆ ಮಾಡುವ ಬಗ್ಗೆ ಅಧಿಕಾರಿಗಳು ರೈತರಿಗೆ ಅಂದಾಜುಪಟ್ಟಿ ನೀಡುತ್ತಾರೆ, ಇದರ ಅನ್ವಯ ಕೃಷಿಹೊಂಡ ನಿರ್ಮಾಣ ಮಾಡಿಕೊಳ್ಳಬೇಕು, ಅಂದಾಜು ಪಟ್ಟಿ ಮೀರಿ ಹಣ ವಿನಿಯೋಗಿಸಿದರೆ ಇದಕ್ಕೆ ಕೃಷಿ ಇಲಾಖೆ ಹೊಣೆಯಲ್ಲ. ಇದನ್ನು ರೈತರು ಗಮನಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಟಾರ್ಪಾಲಿನ್ ಹಾಗೂ ಡೀಸೆಲ್ ಮೋಟಾರ್ ಖರೀದಿಗೆ ಸರ್ಕಾರವೇ ಗುರುತಿಸಿರುವ ಕೆಲವೊಂದು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಅದೇ ಕಂಪನಿಗಳಲ್ಲಿ ಅವುಗಳನ್ನು ಡಿಡಿ ಕಟ್ಟಿ ಖರೀದಿಸಬೇಕು, ಅವುಗಳು ಕೃಷಿ ಹೊಂಡದ ಜಾಗಕ್ಕೆ ತಲುಪಿ ಎಲ್ಲವೂ ಸರಿಯಾಗಿದೆ ಎಂಬುದು ಸ್ಪಷ್ಟವಾದ ಬಳಿಕವಷ್ಟೇ ಆಯಾ ಕಂಪನಿಗಳಿಗೆ ಹಣ ಜಮೆಯಾಗಲಿದೆ.
ೆನ್ಸಿಂಗ್ ಅವರಿಷ್ಟ: ಟಾರ್ಪಾಲಿನ್ ಹಾಗೂ ಡಿಸೇಲ್ ಮೋಟಾರ್ ಹೊರತುಪಡಿಸಿ ಕೃಷಿಹೊಂಡದ ಸುತ್ತಾ ಬೇಲಿ, ೆನ್ಸಿಂಗ್ ಮತ್ತಿತರ ಯಾವುದೇ ತಡೆಗೋಡೆ ನಿರ್ಮಾಣಕ್ಕೆ ಇಂಥಹದ್ದೇ ರೀತಿ ಇರಬೇಕೆಂಬ ಮಾನದಂಡವಿಲ್ಲ. ಆದರೆ ಕಾಟಾಚಾರಕ್ಕೆ ಎಂಬಂತೆ ನಿರ್ಮಾಣ ಮಾಡುವಂತಿಲ್ಲ. ತಡೆಗೋಡೆ ನಿರ್ಮಾಣ ಕಡ್ಡಾಯವಾಗಿದ್ದು ಅಧಿಕಾರಿಗಳ ಪರಿಶೀಲನೆ ವೇಳೆ ಅದು ವೈಜ್ಞಾನಿವಾಗಿದೆ ಎಂಬುದು ಧೃಡಪಟ್ಟ ಬಳಿಕವಷ್ಟೇ ಅನುದಾನ ಖಾತೆ ತಲುಪಲಿದೆ.
ಈ ಹಿಂದೆ ನರೇಗಾ ಯೋಜನೆಯಡಿ ಮೆಟ್ಟಿಲು ಆಕಾರದ ಕೃಷಿಹೊಂಡ ನಿರ್ಮಾಣ ಮಾಡಲಾಗುತ್ತಿತ್ತು ಪ್ರಸ್ತುತ ಕೃಷಿಭಾಗ್ಯ ಯೋಜನೆಯಡಿ ಸ್ಲೋಪ್ ಮಾದರಿಯಲ್ಲಿ ಹೊಂಡ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತಿದೆ. ಈ ಯೋಜನೆಯನ್ನು ಬಹಳ ಸರಳವಾಗಿಸಿದ್ದು ಅರ್ಹ ರೈತರು ಇದರ ಲಾನುಭವಿಗಳಾಗಬಹುದು. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಭೇಟಿ ಮಾಡಬಹುದು.
ಕಸ್ತೂರಯ್ಯ, ಕೃಷಿ ಅಧಿಕಾರಿ ದೊಡ್ಡಬಳ್ಳಾಪುರ