

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹಳೇ ಕೃಷಿ ಹೊಂಡಗಳಿಗೆ ತಡೆಬೇಲಿ (ೆನ್ಸಿಂಗ್) ನಿರ್ಮಾಣಕ್ಕೆ ನರೇಗಾ ಅಥವಾ ಮತ್ತಿತರ ಯೋಜನೆಗಳ ಮೂಲಕ ಅನುದಾನ ನೀಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಕೃಷಿ ಹೊಂಡಗಳಲ್ಲಿ ಜನ ಜಾನುವಾರುಗಳ ಪ್ರಾಣಹಾನಿ ತಪ್ಪಿಸುವ ಸಲುವಾಗಿ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯವಾಗಿ ಪ್ರತಿ ಹೊಂಡಗಳಿಗೂ ಸುರಕ್ಷಿತ ಬೇಲಿ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಜತೆಗೆ ಯಾವುದಾದರೂ ಯೋಜನೆಯಡಿ ದೊರಕುವ ಅನುದಾನವನ್ನು ೆನ್ಸಿಂಗ್ ಅಳವಡಿಕೆಗೆ ವಿನಿಯೋಗಿಸಬಹುದೇ ಎಂಬುದರ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾ ಪಂಚಾಯಿತಿಗೆ ಸೂಚನೆ ರವಾನೆಯಾಗಿದೆ.
ಕೃಷಿಭಾಗ್ಯ ಯೋಜನೆಯಡಿ ಹೊಸದಾಗಿ ಕೃಷಿಹೊಂಡ ನಿರ್ಮಾಣಕ್ಕೆ ಮುಂದಾಗಿರುವ ರೈತರು ಕೃಷಿ ಹೊಂಡಗಳಿಗೆ ಬೇಲಿ (ೆನ್ಸಿಂಗ್) ಅಳವಡಿಸುವುದು ಕಡ್ಡಾಯವಾಗಿದೆ ಇದಕ್ಕೆ ಯೋಜನೆಯಡಿಯೇ ಅನುದಾನ ಸಿಗಲಿದೆ, ಆದರೆ ಹಳೇ ಕೃಷಿಹೊಂಡಗಳಿಗೆ ಅನುದಾನವಿಲ್ಲವೆಂಬ ಕಾರಣಕ್ಕೆ ರೈತರು ಬೇಲಿ ಅಳವಡಿಕೆಗೆ ಮುಂದಾಗುತ್ತಿಲ್ಲ ಎನ್ನಲಾಗಿದೆ. ಅಲ್ಲದೆ ಕೃಷಿ ಹೊಂಡಗಳಿಗೆ ಸುತ್ತ ಸುರಕ್ಷತೆಯ ೆನ್ಸಿಂಗ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ರೈತರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅನುದಾನ ನೀಡಲು ಚಿಂತನೆ ನಡೆಸಿದೆ.
ಕೆಡಿಪಿಯಲ್ಲಿ ಚರ್ಚೆ: ಇತ್ತೀಚಿಗಷ್ಟೆ ದೊಡ್ಡಬಳ್ಳಾಪುರದಲ್ಲಿ ಕೃಷಿಹೊಂಡಕ್ಕೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಪ್ರಕರಣ ಕೆಡಿಪಿ ಸಭೆಯಲ್ಲಿ ಚರ್ಚೆಯಾಯಿತು. ಹೊಸಕೋಟೆ ಶಾಸಕ ಶರತ್‌ಬಚ್ಚೇಗೌಡ ಕೃಷಿಹೊಂಡಗಳಿಗೆ ಕಡ್ಡಾಯವಾಗಿ ಬೇಲಿ ನಿರ್ಮಾಣಕ್ಕೆ ಆದೇಶಿಸುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಲಲಿತಾರೆಡ್ಡಿ ಹೊಸ ಕೃಷಿ ಹೊಂಡಗಳಿಗೆ ಬೇಲಿ ನಿರ್ಮಾಣಕ್ಕೆ ಅನುದಾನವಿದೆ ಆದರೆ ಹಳೇ ಹೊಂಡಗಳಿಗೆ ಅನುದಾನ ನೀಡಲು ಯೋಜನೆಯಡಿ ಅವಶಕಾವಿಲ್ಲ ಎಂದು ಸಭೆ ಗಮನಕ್ಕೆ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹಳೇ ಹೊಂಡಗಳಿಗೂ ಅನುದಾನ ನೀಡುವ ಬಗ್ಗೆ ಅವಕಾಶವಿರುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ನರೇಗಾ ಯೋಜನೆ ಅಥವಾ ಇನ್ನಿತರ ಯೋಜನೆಯಡಿ ಬೇಲಿ ನಿರ್ಮಾಣಕ್ಕೆ ಅವಕಾಶವಿರುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳಿಗೆ ಬೇಲಿ (ೆನ್ಸಿಂಗ್) ಅಳವಡಿಸುವುದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಇದರ ಮಾಹಿತಿ ನೀಡಲಾಗಿದೆ. ಹಳೇ ಕೃಷಿ ಹೊಂಡಗಳಿಗೂ ಬೇಲಿ ಅಳವಡಿಸುವಂತೆ ಎಲ್ಲ ರೈತರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಪ್ರತ್ಯೇಕ ಅನುದಾನ ನೀಡುವ ಕುರಿತು ಚರ್ಚೆಯ ಹಂತದಲ್ಲಿದೆ. ಅನುದಾನ ನೀಡಿದರೆ ರೈತರಿಗೆ ವಿತರಿಸಲು ಕ್ರಮಕೈಗೊಳ್ಳಲಾಗುವುದು.
ಗಾಯತ್ರಿ, ಉಪನಿರ್ದೇಶಕಿ ಕೃಷಿ ಇಲಾಖೆ ಬೆಂ.ಗ್ರಾಮಾಂತರ
ಕೃಷಿಹೊಂಡಗಳಲ್ಲಿ ಸುರಕ್ಷತಾ ಕ್ರಮವಿಲ್ಲದ ಜನಜಾನುವಾರುಗಳ ಪ್ರಾಣಹಾನಿ ಪ್ರಕರಣಗಳು ಹೆಚ್ಚುತ್ತಿವೆ ಈ ಬಗ್ಗೆ ಕಳೆದ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರ ಗಮನ ಸೆಳೆಯಲಾಗಿದೆ. ಕೃಷಿ ಭಾಗ್ಯಯೋಜನೆಯಡಿ ಹೊಸದಾಗಿ ನಿರ್ಮಾಣವಾಗುವ ಕೃಷಿಹೊಂಡಗಳಿಗೆ ಬೇಲಿ ನಿರ್ಮಾಣಕ್ಕೆ ಅನುದಾನವಿದೆ ಎಂಬ ಮಾಹಿತಿ ಇದೆ. ಆದರೆ ಹಳೆ ಹೊಂಡಗಳಿಗೆ ಅನುದಾನದ ಪ್ರಸ್ತಾಪವಿಲ್ಲ. ಆದ್ದರಿಂದ ಹಳೇ ಹೊಂಡಗಳಿಗೂ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ. ರೈತರು ಕಡ್ಡಾಯವಾಗಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು.
ಶರತ್‌ಬಚ್ಚೇಗೌಡ, ಶಾಸಕ ಹೊಸಕೋಟೆ
ರೈತರ ನೀರಾವರಿ ಕನಸಿಗೆ ಕೃಷಿಹೊಂಡಗಳು ವರದಾನವಾಗಿವೆ, ನೀರಿನ ಸಂರಕ್ಷಣೆ ಹಾಗೂ ಸದ್ಭಳಕೆ ವಿಷಯದಲ್ಲಿ ಕೃಷಿಹೊಂಡಗಳು ಪ್ರಮುಖ ಪಾತ್ರವಹಿಸುತ್ತಿವೆ. ಆದರೆ ಸುರಕ್ಷತೆ ಕೊರತೆಯಿಂದ ಪ್ರಾಣಹಾನಿ ಪ್ರಕರಣಗಳಿಗೂ ಕಾರಣವಾಗುತ್ತಿದೆ ಈ ಹಿನ್ನೆಲೆಯಲ್ಲಿ ಕೃಷಿಹೊಂಡಗಳ ಸುತ್ತ ಬೇಲಿ ನಿರ್ಮಿಸಿ ಪ್ರಾಣಹಾನಿ ತಡೆಗೆ ಕ್ರಮಕೈಗೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಲಾಗಿದೆ. ಹಳೇ ಕೃಷಿ ಹೊಂಡಗಳಿಗೆ ಬೇಲಿ ನಿರ್ಮಾಣಕ್ಕೆ ಅನುದಾನ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ