ನಾಲೆಗಳಿಗೆ ನೀರು ಹರಿಸಲು ಮನವಿ

25-04-25--krs4
Published on

 ಕೆ.ಆರ್.ಸಾಗರ : ಆರ್.ಬಿ.ಎಲ್.ಎಲ್. ನಾಲಾ ಮೈಸೂರು ಭಾಗದ 5 ಗ್ರಾಮದ ಕೃಷಿಗೆ ನೀರು ಹರಿಸಲು ಕ್ರಮ ವಹಿಸಬೇಕು ಎಂದು

ಶಾಸಕರು ಹಾಗೂ ಕಾ.ನೀ.ನಿಗಮ ಆಧಿಕಾರಿಗಳಿಗೆ ಆಗ್ರಹಿಸಿ ಶುಕ್ರವಾರ ಕೆಆರ್‌ಎಸ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕೆ.ಆರ್.ಸಾಗರ ಬೃಂದಾವನದಲ್ಲಿ ಸಭೆ ನಡೆಸಲು ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಗ್ರಾಮದ ಕೃಷಿಕರು ಮನವಿ ನೀಡಲು ಮುಂದಾದಾಗ ಅವರು, ತುರ್ತು ಕೆಲಸವಿದೆ ಎಂದು ತೆರಳಿದರು.

ನಂತರ ಸ್ಥಳದಲ್ಲಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡ, ಕಾ.ನೀ.ನಿಗಮ ಕಾರ್ಯಪಾಲಕ ಇಂಜಿನಿಯರ್ ಜಯಂತ್ ಅವರ ಸಮ್ಮುಖ ರೈತರು ಪ್ರತಿಭಟಿಸಿ ದೂರು ನೀಡಿದರು. ತಮ್ಮ ವ್ಯಾಪ್ತಿಯ ನಾಲೆಗೆ ಇಷ್ಟು ದಿನವಾದರೂ ನೀರು ಹರಿದಿಲ್ಲ. ಮೈಸೂರು ನಗರದ ಚರಂಡಿ, ತ್ಯಾಜ್ಯ ನೀರು ಹರಿಯುವ ಕಾರಣ ನಮ್ಮ ನಾಲೆಗಳಲ್ಲಿ ಹೂಳು ತುಂಬಿದೆ. ಗಿಡ, ಗಂಟಿಳು ಬೆಳೆದಿವೆ. ಇದನ್ನು ತೆರವು ಮಾಡಲು ಯಾವುದೇ ಕ್ರಮ ವಹಿಸದ ಇಂಜಿನಿಯರ್‌ಗಳು ನಿರ್ಲಕ್ಷೃ ತೋರಿದ್ದಾರೆ ಎಂದು ದೂರಿದರು. ರೈತರು ಹಾಗೂ ಕಾ.ನೀ.ನಿಗಮ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಆರ್.ಬಿ.ಎಲ್.ಎಲ್. (ಬಲದಂಡೆ ನಾಲೆ) ಸ್ವಚ್ಛಗೊಳಿಸಿ ನಾಲೆಯಲ್ಲಿ ನೀರು ಹರಿಯುವಂತೆ ಕ್ರಮ ವಹಿಸಲು ಸೂಚಿಸಿದರು. ಆರ್.ಬಿ.ಎಲ್.ಎಲ್ ನಾಲೆ ವ್ಯಾಪ್ತಿಯ ಲಕ್ಷ್ಮೀಪುರ, ಸಿದ್ದಲಿಂಗ ಪುರ, ನಾಗನಹಳ್ಳಿ, ಕಳಸ್ತವಾಡಿ ಸೇರಿದಂತೆ ಐದು ಗ್ರಾಮಗಳು ಐವತ್ತಕ್ಕೂ ಹೆಚ್ಚು ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net