

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಕೆ.ಆರ್.ಸಾಗರದ ಆದಿಶಕ್ತಿ ವೈನ್‌ಸ್ಟೋರ್ ಮುಂದೆ ಭಾನುವಾರ ರಾತ್ರಿ ನಡೆದು ಹೋಗುತ್ತಿದ್ದ ಬಿಹಾರ ಮೂಲದ ಕೂಲಿ ಕೆಲಸಗಾರ ವಿಷ್ಣು ಸಹಾನಿ(30) ಎಂಬ ಯುವಕನಿಗೆ ಕೆ.ಆರ್.ಸಾಗರ ನಿವಾಸಿ, ರೌಡಿಶೀಟರ್ ಕಿರಣ ಅಲಿಯಾಸ್ ಅಂಡಾವ ಎಂಬಾತ ಕುಡಿದ ಅಮಲಿನಲ್ಲಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.
ಮಾಹಿತಿ ಮೇರೆಗೆ ಕೆ.ಆರ್.ಸಾಗರ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ರೌಡಿಶೀಟರ್‌ನನ್ನು ವಶಕ್ಕೆ ಪಡೆದು, ಇರಿತಕ್ಕೊಳಗಾದ ಯುವಕನನ್ನು ಮೈಸೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಿದರು.
ಕೆ.ಆರ್.ಸಾಗರ ವೃತ್ತ ನಿರೀಕ್ಷಕ ಪುನೀತ್ ಸ್ಥಳ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ಈ ಕುರಿತು ದೂರು ನೀಡದ ಕಾರಣ ಇನ್ನೂ ಪ್ರಕರಣ ದಾಖಲಾಗಿಲ್ಲ.