

ವಿಜಯಪುರ:ಅಧಿಕಾರ ದುರ್ಬಳಕೆ ಮಾಡಿಕೊಂಡ ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಕೆಆರ್ಎಸ್(ಕರ್ನಾಟಕ ರಾಷ್ಟ್ರ ಸಮಿತಿ) ಪಕ್ಷದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಹಾಯ್ದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಅಶೋಕ ಜಾಧವ ಮಾತನಾಡಿ, ಸೆ.26 ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಠಾಣೆ ಸಿಬ್ಬಂದಿ ಬಲಾಢ್ಯರ ಜತೆ ಕೈಜೋಡಿಸಿ ಕುತಂತ್ರವೆಸಗಿದ್ದಾರೆ. ಅವರಿಗೆ ಆದ ಅನ್ಯಾಯದ ವಿರುದ್ಧ ಕೆಆರ್ಎಸ್ ಸದಸ್ಯರು ಧ್ವನಿ ಎತ್ತಿದ್ದಕ್ಕಾಗಿ ಪ್ರತಿಕಾರವಾಗಿ ದೂರು ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಂಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಮಾದನಾಯಕನಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಮುರಳೀಧರ್ ಮತ್ತು ಸಿಬ್ಬಂದಿ ಹಾಗೂ ನೆಲಮಂಗಲ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ನರೇಂದ್ರಬಾಬು ಅವರು ನಮ್ಮ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಮೊಬೈಲ್ ಕಸಿದುಕೊಂಡು ಹಲ್ಲೆ ನಡೆಸಿ, ಸುಳ್ಳು ಕೇಸು ದಾಖಲಿಸಿಕೊಂಡಿದ್ದು ಖಂಡನಾರ್ಹವಾಗಿದೆ. ಕೂಡಲೇ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಪಕ್ಷದ ಕಾರ್ಯಕರ್ತರಾದ ಗಣಪತಿ ರಾಠೋಡ, ದುರ್ಗಪ್ಪ ಬೂದಿಹಾಳ, ಸೀನು ಹಿಪ್ಪರಗಿ, ಲಕ್ಷ$್ಮಣ ಚಡಚಣ, ನಬಿ ಹುಣಶ್ಯಾಳ, ಮುತ್ತು ಹೊನಗೊಂಡ, ಸುರೇಂದ್ರ ಕುಮಸಲೆ, ಹಮೀದ ಇನಾಮದಾರ, ನಬಿರಸೂಲ್ ಜಮಾದಾರ, ಮಲ್ಲಿಕಾರ್ಜುನ ಬಿರಾದಾರ, ಲಕ್ಷ$್ಮಣ ಕೋಳಿ, ರಮಜಾನ್ ಕೊಂಕಣಿ, ದೇಸು ಚವಾಣ, ೂರಕನಾಥ ಚವಾಣ, ಪರಶುರಾಮ ಕೋಣಕಟ್ಟಿ, ವಿನೋದ ವಾಲಿಕಾರ, ಶ್ರೀಶೈಲ ತಳವಾರ, ಭೀಮಾಶಂಕರ ಕಾಂಬಳೆ, ರಾವುತಪ್ಪ ಮದಭಾವಿ, ವಿಕ್ರಮ ವಾಗಮೋರೆ, ಸುನೀಲ ರಾಠೋಡ ಮತ್ತಿತರರಿದ್ದರು.
ಅಧಿಕಾರ ದುರ್ಬಳಕೆ ಮಾಡಿಕೊಂಡ ಮಾದನಾಯಕನಹಳ್ಳಿ ಪೊಲೀಸ್ ಠಾಣಿ ಸಿಬ್ಬಂದಿ ಅಮಾನತುಗೊಳಿಸುವಂತೆ ಒತ್ತಾಯಿಸಿ ವಿಜಯಪುರದಲ್ಲಿ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಅಶೋಕ ಜಾಧವ, ಶಿವಾನಂದ ಯಡಹಳ್ಳಿ, ದುರ್ಗಪ್ಪ ಬೂದಿಹಾಳ ಮತ್ತಿತರರಿದ್ದಾರೆ.