ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿತ: ಕೆಆರ್‌ಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ರಮೇಶ್‌ಗೌಡ ಟೀಕೆ

KRS party press conference Mandya
Published on

ಮಂಡ್ಯ: ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿರುವುದು ಮೈಕ್ರೋ ಫೈನಾನ್ಸ್ ಹಾವಳಿ ಮಿತಿ ಮೀರಲು ಕಾರಣವಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಉಸ್ತುವಾರಿ ಜಿ.ಎಂ.ರಮೇಶ್‌ಗೌಡ ಆರೋಪಿಸಿದರು.

ಮುಖ್ಯಮಂತ್ರಿಯ ಆದೇಶವಿದ್ದರೂ ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿಗೆ ಯಾವುದೇ ಕಡಿವಾಣ ಹಾಕಲು ಸಾಧ್ಯವಾಗದಂತಾಗಿದೆ. ರಾಜ್ಯಾದ್ಯಂತ ಲಕ್ಷಾಂತರ ದೂರು ಬಂದರೂ ಯಾವುದೇ ಕ್ರಮವಾಗಿಲ್ಲ. ಸರ್ಕಾರ ಅಧಿಕಾರ ಹಂಚಿಕೆ, ಗ್ಯಾರೆಂಟಿ ಯೋಜನೆಗಳ ನೆಪವೊಡ್ಡಿ ಮಧ್ಯಮ ವರ್ಗದ ಜನಸಾಮಾನ್ಯರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಅಧೋಗತಿಗೆ ತಲುಪಿದ್ದು, ಈ ವ್ಯವಸ್ಥೆಗಳನ್ನು ಪಡೆಯಲು ಖಾಸಗಿಯವರ ಸಾಲದ ಶುಲಕ್ಕೆ ಸಿಲುಕಿ, ದುಡಿಮೆಯ ಬಹುಪಾಲನ್ನು ಬಡ್ಡಿ ಕಟ್ಟುವಲ್ಲಿಯೇ ಕಳೆಯುವಂತಾಗಿದೆ. ರಾಯಚೂರು, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವಿನಿಂದ ಖಾಸಗಿ ಆಸ್ಪತ್ರೆಯತ್ತ ಜನರು ಏಕೆ ಮುಖ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.

ಜಿಲ್ಲಾಧ್ಯಕ್ಷ ಡಿ.ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಮಲ್ಲೇಶ, ವೈ.ಕೆ.ಶಶಿಧರ, ಮಂಜುನಾಥ್, ಸಿ.ಕೆ.ಜಯರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net