ಕೆ.ಆರ್.ಸಾಗರ ಅಣೆಕಟ್ಟೆ ಹೊರಹರಿವು ಹೆಚ್ಚಳ

06-07-25--krs1 (1)
Published on

* ಜಲಾನಯನ ಪ್ರದೇಶಗಳಲ್ಲಿ ಅಧಿಕ ಮಳೆ

* ಶನಿವಾರದ ನೀರಿನ ಮಟ್ಟ 123 ಅಡಿ

ಕೆ.ಆರ್.ಸಾಗರ : ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದ್ದು, ಕೆ.ಆರ್. ಸಾಗರ ಜಲಾಶಯದಿಂದ

ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಹಾರಂಗಿ, ಹೇಮಾವತಿ ಅಣೆಕಟ್ಟೆಗಳಿಂದಲೂ ನೀರು ಕೃಷ್ಣರಾಜ ಸಾಗರಕ್ಕೆ ಹರಿದು ಬರುತ್ತಿರುವ ಕಾರಣ ಸುರಕ್ಷತೆ ಹಿನ್ನೆಲೆಯಲ್ಲಿ ಹೊರಹರಿವನ್ನು ಹೆಚ್ಚಿಸಲಾಗಿದೆ. 26 ಗೇಟುಗಳಿಂದ 48 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ.

ಶನಿವಾರ ಬೆಳಗ್ಗೆ ಕೆ.ಆರ್.ಸಾಗರ ಅಣೆಕಟ್ಟೆಗೆ ಒಳಹರಿವು 25,051 ಕ್ಯೂಸೆಕ್ ಇತ್ತು. 47.625 ಟಿ.ಎಂ.ಸಿ ನೀರಿನ ಸಂಗ್ರಹವಿರುವ ಕಾರಣ (123 ಅಡಿ) 3,759 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 100.30 ಅಡಿ ನೀರು ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net