ಮಲೇರಿಯಾ ತಡೆಗೆ ಎಲ್ಲರೂ ಸಹಕರಿಸಿ

17-06--krs3 (1)
Published on

ಕೆ.ಆರ್.ಸಾಗರ : ಸೊಳ್ಳೆಗಳಿಂದ ಪ್ರಸಾರವಾಗುವ ಮಲೇರಿಯಾ ತಡೆಗೆ ಎಲ್ಲರೂ ಸಹಕರಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.
ಕೆ.ಆರ್.ಸಾಗರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಕೆ.ಆರ್.ಸಾಗರ ಆಯುಷ್ಮಾನ್ ಆರೋಗ್ಯ ಮಂದಿರದ ವತಿಯಿಂದ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಮಲೇರಿಯಾ ಸೋಂಕಿತ ವ್ಯಕ್ತಿಗೆ ಕಚ್ಚಿ ರಕ್ತ ಹೀರಿ ಆರೋಗ್ಯವಂತ ವ್ಯಕ್ತಿಗೆ ಕಚ್ಚಿದರೆ ರೋಗ ಹರಡುತ್ತದೆ. ಮೊದಲು ಚಳಿ, ನಂತರ ವಿಪರೀತ ಜ್ವರ ಬಂದು ಕೊನೆಗೆ ಬೆವರುವಿಕೆ ಉಂಟಾಗುತ್ತದೆ. ಈ ಲಕ್ಷಣಗಳು ಪುರ್ನಾವರರ್ತನೆ ಗೊಂಡರೆ ತಕ್ಷಣ ವೈದ್ಯರ ಬಳಿ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದವರು ಹೇಳಿದರು. ಒಟ್ಟಾರೆ ಸೊಳ್ಳೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ಮಳೆಗಾಲ ಆರಂಭವಾಗಿರುವುದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜ್ವರ ಬಂದ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರಿಕ್ಷೇ ಮಾಡಿಸಿಕೊಳ್ಳಬೇಕು ಎಂದರು. ಸೊಳ್ಳೆ ಪರದೆ ಉಪಯೋಗಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದಿರಂದ ಮಲೇರಿಯಾ ತಡೆ ಗಟ್ಟಬಹುದು ಎಂದರು. ಉಪ ಪ್ರಾಂಶುಪಾಲ ಉಮೇಶ್ವರ, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಸೌಮ್ಯಾ, ಆರೋಗ್ಯ ನೀರಕ್ಷಣಾಧಿಕಾರಿ ರಮ್ಯಾ, ಅಂಗನವಾಡಿ ಕಾಯಕರ್ತೆಯರು, ಮತ್ತು ಶಾಲೆಯ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net