ಕೆಆರ್​ಎಸ್​ ಡ್ಯಾಂ ಮೇಲೆ ನಿಷೇಧವಿದ್ದರೂ ಪೊಲೀಸ್​ ಜೀಪ್​ನಲ್ಲೇ ದರ್ಬಾರ್​ ನಡೆಸಿದ ಯುವಕ!

krs dam
Published on

ಮಂಡ್ಯ: ಕೆಆರ್​ಎಸ್​ ಡ್ಯಾಂ ಮೇಲೆ ಯುವಕನೊಬ್ಬ ಪೊಲೀಸ್​ ಜೀಪ್​ನಲ್ಲಿ ಕುಳಿತು ದರ್ಬಾರ್​ ನಡೆಸಿದ್ದಾನೆ. ಕಾನೂನು ಪಾಲಿಸಬೇಕಿದ್ದ ಪೊಲೀಸಪ್ಪನಿಂದಲೇ ಯುವಕನ ದರ್ಬಾರ್​ಗೆ ಸಾಥ್ ನೀಡಲಾಗಿದೆ.

ಭದ್ರತೆ ದೃಷ್ಟಿಯಿಂದ ಡ್ಯಾಂ ಮೇಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಇದೆ. ಡ್ಯಾಂ ಭದ್ರತೆ ನೋಡಿಕೊಳ್ಳಬೇಕಿದ್ದ ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆಯಾಗಿದ್ದು, ಸರ್ಕಾರಿ ವಾಹನದಲ್ಲಿ ಕುಳಿತ ಯುವಕ ಮೊಬೈಲ್​ ಕ್ಯಾಮರಾಗೂ ಪೋಸ್​ ಕೊಟ್ಟಿದ್ದಾನೆ. ಯುವಕ ಜೀಪ್ ಚಲಾಯಿಸುತಿದ್ರೆ ಪಕ್ಕದಲ್ಲಿ ಕೂತಿದ್ದ ಪೊಲೀಸ್ ಅಧಿಕಾರಿ ಮೊಬೈಲ್​ನಲ್ಲಿ ಶೂಟ್ ಮಾಡಿದ್ದಾರೆ.

ಪೊಲೀಸ್ ಜೀಪ್​ಅನ್ನು ಡ್ಯಾಂ ಮೇಲೆ ಯುವಕ ಚಲಾಯಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಂಡ್ಯದಲ್ಲಿ ಸಾಮಾನ್ಯ ಜನರಿಗೊಂದು ನಿಯಮ, ಅಧಿಕಾರಿ ಕಡೆಯವರಿಗೊಂದು ನಿಯಮವೇ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿದೆ. ನಿಯಮ ಉಲ್ಲಂಘಿಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net