ತುರ್ತಾಗಿ ನೀರು ಬಿಡುಗಡೆ ಮಾಡಿ: ಜಿಲ್ಲಾಡಳಿತಕ್ಕೆ ರೈತರ ಆಗ್ರಹ

KRS4
Published on

ಮಂಡ್ಯ: ಬೆಳೆದು ನಿಂತಿರುವ ಬೆಳೆ ಉಳಿಸಿಕೊಳ್ಳಲು ಹಾಗೂ ಜನ, ಜಾನುವಾರುಗಳಿಗೆ ಅನುಕೂಲವಾಗುವಂತೆ ಕೂಡಲೇ ಕೆಆರ್‌ಎಸ್ ಡ್ಯಾಂನಿಂದ ತುರ್ತಾಗಿ ನೀರು ಬಿಡುಗಡೆ ಮಾಡುವಂತೆ ರೈತ ಸಂಘದ ಕೆರಗೋಡು ಹೋಬಳಿ ಘಟಕದ ಸದಸ್ಯ ಜಿ.ಕೆಬ್ಬಳ್ಳಿ ಕೆ.ಪಿ.ಮಂಜುನಾಥ್ ಒತ್ತಾಯಿಸಿದರು.

ಜಿಲ್ಲೆಯಲ್ಲಿ ತಾಪಮಾನ 37 ಸೆಲ್ಸಿಯಸ್ ಡಿಗ್ರಿಯಿದೆ. ಪರಿಣಾಮ ಕೆರೆ, ಕಟ್ಟೆಯಲ್ಲಿದ್ದ ನೀರು ಬತ್ತಿ ಹೋಗಿದ್ದು, ಬೆಳೆದು ನಿಂಯತಿರುವ ಬೆಳೆ ರೈತರ ಕೈ ಸೇರದೆಂಬ ಆತಂಕ ಎದುರಾಗಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಜಿ.ಕೆಬ್ಬಳ್ಳಿ ಹರೀಶ್, ಪಣಕನಹಳ್ಳಿ ಧನಂಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net