ಕೆಆರ್‌ಎಸ್ ಡ್ಯಾಂಗೆ ಬಾಗಿನ ಅರ್ಪಿಸಿದ ತ್ರಿನೇತ್ರ ಶ್ರೀಗಳು

Krs
Published on

ಕೆಆರ್‌ಎಸ್: ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿ ಡಾ.ಶ್ರೀತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸೋಮವಾರ ಪೂರ್ಣ ಭರ್ತಿಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಗೆ ಬಾಗಿನ ಅರ್ಪಿಸಿದರು.

ಅಣೆಕಟ್ಟೆ ತುಂಬಿದಾಗಲೆಲ್ಲ ಶ್ರೀಮಠದ ಮರಿದೇವರು ಶೀವಯೋಗಿ ಸ್ವಾಮೀಜಿ ಬಾಗಿನ ಅರ್ಪಿಸುತ್ತಿದ್ದರು. ಆ ಪದ್ಧತಿಯನ್ನು ನಾವು ಮುಂದುವರಿಸಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ನಮ್ಮ ಭಕ್ತಾದಿಗಳ ಜತೆಗೂಡಿ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಬಾಗಿನ ಅರ್ಪಿಸಲಾಗಿದೆ ಎಂದರು.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ, ಉದ್ಯಮಿ ಶೈಲ ರಾಮಣ್ಣನವರ್, ಮುಖಂಡರಾದ ಗಿರೀಶ್, ಮುತ್ತಣ್ಣ, ಜಗದೀಶ್, ರಾಜಕುಮಾರ್, ವೀರಣ್ಣ, ಟಿ.ಪಿ.ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net