ಸಮಾಜಮುಖಿ ಕಾರ್ಯದಿಂದ ಜೀವನ ಸಾರ್ಥಕ : ಚಂದ್ರಶೇಖರ ಸ್ವಾಮೀಜಿ ಶುಭನುಡಿ

New Project (26)
Published on

ಮೂಲ್ಕಿ: ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಆಧ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ಪಡುಪಣಂಬೂರು ಹೊಯ್ಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸಾಹಿತಿ, ಲೇಖಕಿ ಶಕುಂತಲಾ ಭಟ್ ಅವರ 87ನೇ ಕೃತಿ ಪ್ರಬಂಧಗಳ ಸಂಗ್ರಹ ಗೊಂಚಲು ಬಿಡುಗಡೆ ಮಾಡಿ ಮಾತನಾಡಿದರು.

ಸಾಹಿತ್ಯ ಲೇಖನಗಳ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜತೆಗೆ ಜನರಿಗೆ ಓದುವ ಅಭಿರುಚಿ ಹೆಚ್ಚಿಸುವ ಎಚ್.ಶಕುಂತಲಾ ಭಟ್ ಅವರ ಕಾರ್ಯ ಸಾಧನೆ ಅಭಿನಂದನೀಯ ಎಂದರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಪ್ರಭಾವಶಾಲಿ ಲೇಖನಗಳ ಮೂಲಕ ಎಳೆಯರಿಂದ ಹಿರಿಯರವರೆಗೆ ಓದುಗರ ಮನ ಗೆಲ್ಲುತ್ತಿರುವ ಲೇಖಕಿ ಶಕುಂತಲಾ ಭಟ್ ಸಾಧನೆ ಅಭಿನಂದನೀಯ ಎಂದರು.

ಶಕುಂತಲಾ ಭಟ್ ಅವರನ್ನು ಗೌರವಿಸಲಾಯಿತು. ಶ್ರೀ ಚಂದ್ರಶೇಖರ ಸ್ವಾಮಿಜಿ ಆಶ್ರಮ ನಿರ್ದೇಶಕರಾದ ರಜನಿ ಸಿ.ಭಟ್, ರಾಹುಲ್ ಚಂದ್ರಶೇಖರ್, ರಾಘವ ಸೂರ್ಯ, ಸಂಚಾಲಕ ಪುನೀತ್ ಕೃಷ್ಣ, ಲೇಖಕಿ ಶಕುಂತಲಾ ಭಟ್, ವಿದ್ಯಾ ಭಟ್ ಉಪಸ್ಥಿತರಿದ್ದರು. ಲೇಖಕಿ ಶಕುಂತಲಾ ಭಟ್ ಸ್ವಾಗತಿಸಿ, ಪುನೀತ್ ಕೃಷ್ಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net