

ಮೂಡುಬಿದಿರೆ: ಶತಮಾನ ಕಾಣುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇಂದು ಹಳ್ಳಿ ಹಳ್ಳಿಗಳಲ್ಲಿ ಪಸರಿಸಿ ದೇಶ ಮಾತ್ರವಲ್ಲ ವಿದೇಶದಲ್ಲೂ ವಿಸ್ತರಿಸಿದೆ. ಸ್ವಾತಂತ್ರೃ ಹೋರಾಟದಲ್ಲಿಯೂ ಆರೆಸ್ಸೆಸ್ ಸಕ್ರಿಯವಾಗಿತ್ತು. ತೀರಾ ಇತ್ತೀಚಿನ ಪೆಹಲ್ಗಾಮ್ ದುರಂತ, ಗುಜರಾತ್ ವಿಮಾನ ದುರಂತದ ವೇಳೆಯೂ ಆರೆಸ್ಸೆಸ್ ಕಾರ್ಯಕರ್ತರು ಅಲ್ಲಿ ಸೇವಾ ನಿರತರಾಗಿದ್ದರು ಎಂದು ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ, ಪ್ರಾಧ್ಯಾಪಕ ಡಾ.ರವಿ ಮಂಡ್ಯ ಹೇಳಿದರು.
ಸ್ವಾತಂತ್ರೃ ದಿನಾಚರಣೆಯಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಲೇಖಕ, ಪ್ರಕಾಶಕ ನಂದಿಕೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ, ಮಾಜಿ ಪತ್ರಕರ್ತ ಹಾಗೂ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಬರೆದ ಆರ್.ಎಸ್.ಎಸ್ 100: ಶತ ಪಥ ಸಂಚಲನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬೆಂಗಳೂರು ವಿದ್ಯಾಭಾರತಿ ಸಂಸ್ಥೆ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್, ಲೇಖಕ ಶಿಕಾರಿಪುರ ಈಶ್ವರ ಭಟ್, ಎಚ್.ಎನ್.ನಟರಾಜ್ ಉಪಸ್ಥಿತರಿದ್ದರು. ರೋಹನ್ ಅತಿಕಾರಿಬೆಟ್ಟು ನಿರೂಪಿಸಿದರು. ವೆಂಕಟರಮಣ ಕೆರೆಗದ್ದೆ ವಂದಿಸಿದರು.