

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಕಿಲ್ಲೆಯಲ್ಲಿರುವ ಶ್ರೀ ಕೃಷ್ಣೇಂದ್ರ ಗುರುಗಳ ಮಠದಲ್ಲಿ (ಶ್ರೀ ದತ್ತ ಮಂದಿರ) ಶ್ರೀ ಕೃಷ್ಣೇಂದ್ರ ಗುರುಗಳ 168ನೇ ಆರಾಧನಾ ಮಹೋತ್ಸವವನ್ನು ನ. 25ರಿಂದ ಎರಡು ದಿನಗಳ ವರೆಗೆ ಏರ್ಪಡಿಸಲಾಗಿದೆ. ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ನ. 17ರಂದು ಸಂಜೆ 6 ಗಂಟೆಗೆ ಹಳೇಹುಬ್ಬಳ್ಳಿಯ ಶ್ರೀ ಭವಾನಿಶಂಕರ ಮಹಿಳಾ ಮಂಡಳ ಹಾಗೂ ಶ್ರೀ ಲೋಕಮಾನ್ಯ ವನಿತಾ ಮಂಡಳದಿಂದ ಭಜನೆ, ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ.
ನ. 18ರಂದು ಸಂಜೆ 5ಕ್ಕೆ ಶೋಭಾಯಾತ್ರೆ ಜರುಗಲಿದೆ. ನ. 19 ಹಾಗೂ 20ರಂದು ಸಂಜೆ 6ಕ್ಕೆ ಸತ್ಸಂಗ, ಸುಂದರ ಬದುಕಿನ ಸೂತ್ರ ಕುರಿತು ಶ್ರೀ ಕೃಷ್ಣ ಗುರೂಜಿ ಸಂಪಗಾಂವಕರ ಅವರಿಂದ, ನ. 21ರಿಂದ 23ರ ವರೆಗೆ ಸಂಜೆ 5.30ಕ್ಕೆ ಡಾ. ವಿಶ್ವನಾಥ ಹಂಪಿಹೊಳಿ ಅವರಿಂದ ಭಾಗವತ್ ಪ್ರವಚನ ನಡೆಯಲಿದೆ.
ಆರಾಧನೆ ಅಂಗವಾಗಿ ನ. 17ರಿಂದ 25ರ ವರೆಗೆ ಬೆಳಗ್ಗೆ 9.30ಕ್ಕೆ ಶ್ರೀ ಕೃಷ್ಣಮೂತಿರ್ ವಾಡೀಕರ ಅವರಿಂದ ಶ್ರೀ ಗುರು ಚರಿತ್ರೆ ಹಾಗೂ ಶ್ರೀ ಕೃಷ್ಣೇಂದ್ರ ಗುರು ಚರಿತ್ರೆ ಪಠಣ ನಡೆಯಲಿದೆ.
ನ. 19ರಿಂದ 27ರ ವರೆಗೆ ಬೆಳಗ್ಗೆ 5.30ಕ್ಕೆ ಕಾಕಡಾರತಿ. ನ. 25ರಂದು ಬೆಳಗ್ಗೆ 6.30ಕ್ಕೆ ಆರಾಧನಾ ಮಹೋತ್ಸವ, ದತ್ತ ಪಾದುಕೆಗಳಿಗೆ ಲು ರುದ್ರಾಭಿಷೇಕ, ಪುರಾಣ ಮಂಗಲ, ಗುರುಪೂಜಾ, ಗುರುಗಳಿಗೆ ಲು ರುದ್ರಾಭಿಷೇಕ, ಅಲಂಕಾರ ಬ್ರಾಹ್ಮಣರ ಗುರುಪೂಜೆ, ಭೋಜನ ತೀರ್ಥ ಪೂಜೆ, ಮಧ್ಯಾಹ್ನ ಹಾಗೂ ರಾತ್ರಿ ಮಹಾಪ್ರಸಾದ ವಿತರಣೆ, ರಾತ್ರಿ ಕಾತಿರ್ಕೋತ್ಸವ ನಡೆಯಲಿದೆ.
ನ. 26ರಂದು ಬೆಳಗ್ಗೆ 7ಕ್ಕೆ ಬುತ್ತಿಪೂಜೆ, ದರ್ಶನ, ಮಹಾಪ್ರಸಾದ ವಿತರಣೆ ಜರುಗಲಿದೆ.
ಶ್ರೀ ಕೃಷ್ಣೇಂದ್ರ ಗುರು ಉತ್ಸವ ಸಂಸ್ಥಾ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಮೋಹನ ಕುಲಕರ್ಣಿ, ಗೌರವ ಕಾರ್ಯದರ್ಶಿ ಕೃಷ್ಣಮೂರ್ತಿ ವಾಡೀಕರ, ಖಜಾಂಚಿ ನರೇಂದ್ರ ಜೋಶಿ, ಸದಸ್ಯರಾದ ಶ್ರೀಪಾದ ದೇಸಾಯಿ, ಮಹೇಶ ಜೋಶಿ, ಮುಕುಂದ ಕುಲಕರ್ಣಿ ಹಾಗೂ ವಿನಾಯಕ ದೇಸಾಯಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಪ್ರಕಟಣೆ ತಿಳಿಸಿದೆ.