ಶ್ರೀ ಚಾಮರಾಜೇಂದ್ರ ಸ್ಕೂಲ್ ಫಾರ್ ಎಕ್ಸಲೆನ್ಸ್‌ನಲ್ಲಿ ಕೃಷ್ಣೋತ್ಸವ

Published on

ಮೈಸೂರು: ನಗರದ ಶ್ರೀ ಚಾಮರಾಜೇಂದ್ರ ಸ್ಕೂಲ್ ಫಾರ್ ಎಕ್ಸಲೆನ್ಸ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಕೃಷ್ಣೋತ್ಸವ ಆಯೋಜಿಸಲಾಗಿತ್ತು.
ನರ್ಸರಿಯಿಂದ 7ನೇ ತರಗತಿಯವರೆಗೆ ಮಕ್ಕಳಿಗೆ ಆಯೋಜಿಸಿದ್ದ ಛದ್ಮವೇಷ, ಬಣ್ಣ ಹಚ್ಚುವುದು, ಚಿತ್ರಕಲೆ, ಕಥೆ ಹೇಳುವುದು, ಲಿಖಿತ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ಸಂಭ್ರಮದಿಂದ ಭಾಗವಹಿಸಿದ್ದರು. ವಿಜೇತರಾದವರು ಬಹುಮಾನ ಪಡೆದುಕೊಂಡರು.
ಶಾಲೆಯ ಉಪಾಧ್ಯಕ್ಷೆ ಡಾ.ಭಾರತಿ ಶ್ರೀಧರ್ ರಾಜೇ ಅರಸ್, ಕೃಷ್ಣನಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೃಷ್ಣನ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಕಾರ್ಯದರ್ಶಿ ಮಹೇಶ ಎನ್.ಅರಸ್ ಮಾತನಾಡಿ, ಕೃಷ್ಣ ಸುಧಾಮರ ಗೆಳೆತನದ ಮಹತ್ವವನ್ನು, ಗುರು ಹಿರಿಯರಲ್ಲಿ ಶ್ರದ್ಧೆ, ಭಕ್ತಿ, ಜೀವನದಲ್ಲಿ ಸತ್ಯದ ದಾರಿಯಲ್ಲಿ ನಡೆಯುವುದು ಜೀವನದ ಮಹತ್ವವನ್ನು ಹೆಚ್ಚಿಸುತ್ತದೆ ಎಂಬುದನ್ನು ತಿಳಿಸಿದರು. ಜಂಟಿ ಕಾರ್ಯದರ್ಶಿಶ್ರೀಕಂಠ ರಾಜೆ ಅರಸ್, ಟ್ರಸ್ಟಿ ಬಾಲಚಂದ್ರ ರಾಜೇ ಅರಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net