ಉಡುಪಿ ಕೃಷ್ಣ ಮಠದಲ್ಲಿ ಆ.14ರಿಂದ ಅಷ್ಟಮಿ ಸ್ಪರ್ಧೆ

krishna udupi
Published on

ಉಡುಪಿ: ಕೃಷ್ಣಾಷ್ಟಮಿ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ಆ.14ರಿಂದ 20ರವರೆಗೆ ವ್ಯಕಿ ್ತಗತ ಸ್ಪ್ಪರ್ಧೆ, ಹುಲಿವೇಷ ಕುಣಿತ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.
14ರಂದು ಮಧ್ವಮಂಟಪದಲ್ಲಿ ಬೆಳಗ್ಗೆ 11ಕ್ಕೆ 8 ರಿಂದ 12 ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆಶುಭಾಷಣ ಸ್ಪರ್ಧೆ, 15ರಂದು ಮಧ್ಯಾಹ್ನ 2.30ಕ್ಕೆ 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಂಗೀತ ಸ್ಪರ್ಧೆ (ದಾಸರಪದ), 18ರಂದು 2.30ಕ್ಕೆ ಸಾರ್ವಜನಿಕರಿಗೆ ಶಂಖ ಊದುವ ಸ್ಪರ್ಧೆ ನಡೆಯಲಿದೆ.

19 ರಂದು ಬೆಳಗ್ಗೆ 9.30ರಿಂದ ಕೃಷ್ಣಾಷ್ಟಮಿ ಅಂಗವಾಗಿ ಮಧ್ವಾಂಗಣ, ಭೋಜನಶಾಲೆ ಮಳಿಗೆ, ಅನ್ನಬ್ರಹ್ಮದಲ್ಲಿ ಕೃಷ್ಣವೇಷ ಸ್ಪರ್ಧೆ ನಡೆಯಲಿದೆ. 20ರಂದು ರಾಜಾಂಗಣ ಸಾಯಂಕಾಲ 5 ರಿಂದ 7.30ರವರೆಗೆ ಹುಲಿವೇಷ ಮತ್ತು ಜಾನಪದ ನೃತ್ಯ ಆಯೋಜಿಸಲಾಗಿದೆ. ಜಾನಪದ ನೃತ್ಯದಲ್ಲಿ ಕನಿಷ್ಠ 4 ಸ್ಪರ್ಧಾಳುಗಳು ಅವಶ್ಯ.

ಸ್ಪರ್ಧಾಳುಗಳು ಮಠದ ಬಡಗುಮಾಳಿಗೆಯಲ್ಲಿ ನಿಗದಿತ ವಿಭಾಗಕ್ಕೆ ಹೆಸರು ನೋಂದಾಯಿಸಬೇಕು. ವಯಸ್ಸಿನ ದೃಡೀಕರಣ ಪತ್ರ ಜೊತೆಗಿರಬೇಕು. ಪ್ರತಿಯೊಂದು ವಿಭಾಗದಲ್ಲೂ ಮೂರು ಬಹುಮಾನಗಳಿವೆ. ವ್ಯಕ್ತಿಗತ ಸ್ಪರ್ಧೆಯಲ್ಲಿ ಪ್ರಥಮ 1 ಸಾವಿರ ರೂ., ದ್ವಿತೀಯ 750 ರೂ., ತೃತೀಯ 500 ರೂ. ಹುಲಿವೇಷ ಸ್ಪರ್ಧೆಯಲ್ಲಿ ಪ್ರಥಮ 15 ಸಾವಿರ ರೂ, ದ್ವಿತೀಯ 10 ಸಾವಿರ ರೂ., ತೃತೀಯ 5 ಸಾವಿರ ರೂ., ಜಾನಪದ ಸ್ಪರ್ಧೆಯಲ್ಲಿ ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ. ನಿಗದಿಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶಿ ್ರೀಕೃಷ್ಣ ಮಠ ಕಾರ್ಯಾಲಯ (0820 -2520598) ಸಂಪರ್ಕಿಸಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net