ಅಮ್ಮನ ಮಡಿಲಲ್ಲಿ ಮಕ್ಕಳ ಕಲರವ- ವಿಜಯವಾಣಿ ಪತ್ರಿಕೆ, ದಿಗ್ವಿಜಯ ನ್ಯೂಸ್, ಅಮೃತಾನಂದಮಯಿ ಮಠ ಸಹಯೋಗದಲ್ಲಿ ಕೃಷ್ಣಾಷ್ಟಮಿ ಸ್ಪರ್ಧೆ

amma
Published on

ನಗರದ ಬೋಳೂರಿನಲ್ಲಿರುವ ಅಮ್ಮನ (ಅಮೃತಾನಂದಮಯಿ) ಭಕ್ತರಿಂದ ನಡೆಸಲ್ಪಡುವ ಅಮೃತ ವಿದ್ಯಾಲಯದ ಸಾನಿಧ್ಯ ಗುರುವಾರ ಬೆಳಗ್ಗೆ ಮಕ್ಕಳ ಕಲರವದಿಂದ ತುಂಬಿತ್ತು.
ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ವಿಜಯವಾಣಿ ದಿನಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ಸಹಯೋಗದೊಂದಿಗೆ ಮಕ್ಕಳಿಗಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿವಿಧ ವಯೋಮಾನದ ಚಿಣ್ಣರು ಉತ್ಸಾಹದಿಂದ ಭಾಗವಹಿಸಿದರು.

ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವದಿಸಿದ ಅಮೃತಾನಂದಮಯಿ ಮಠದ ಮುಖ್ಯಸ್ಥೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು, ರಾಧಾಕೃಷ್ಣ, ಯಶೋಧ ಕೃಷ್ಣ ವೇಷ ಮುಂತಾದ ಸ್ಪರ್ಧೆಗಳು ನಮ್ಮ ಸನಾತನ ಸಂಸ್ಕೃತಿಯ ಪ್ರದರ್ಶನ. ಇದರ ಮೂಲ ಆಧ್ಯಾತ್ಮ. ಈ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಮಕ್ಕಳು ಹಾಗೂ ಮನೆಮಂದಿಯ ಬದುಕು ಪರಿಶುದ್ಧಗೊಳ್ಳುವುದು ಎಂದು ಹೇಳಿದರು.

ಸೇವಾ ಸಮಿತಿ ಅಧ್ಯಕ್ಷರಾದ ಡಾ. ವಸಂತಕುಮಾರ ಪೆರ್ಲ, ಅಮೃತ ವಿದ್ಯಾಲಯದ ನಿರ್ದೇಶಕ ಯತೀಶ್‌ ಬೈಕಂಪಾಡಿ, ಶಾಲಾ ಪ್ರಾಂಶುಪಾಲೆ ಆರತಿ ಶೆಟ್ಟಿ ಮತ್ತು ಅಯುಧ್ ಅಧ್ಯಕ್ಷೆ ಮೇಘನಾ, ಬಿ. ಉಪಸ್ಥಿತರಿದ್ದರು. 
ಕೃಷ್ಣಾಷ್ಟಮಿ ಪ್ರಯುಕ್ತ 2ರಿಂದ 6 ವರ್ಷದ ವರೆಗಿನ ಮತ್ತು 7ರಿಂದ 10 ವರ್ಷದೊಳಗಿನ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ಮತ್ತು ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಗಳು ಜರಗಿದವು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net