

ಧಾರವಾಡ: ಜಗತ್ತಿನಲ್ಲಿ ಕಾಲ-ಕಾಲಕ್ಕೆ ಅನಾಚಾರ ಹೆಚ್ಚಿದಾಗ ಭಗವಂತ ಈ ಭೂಮಿಯ ಮೇಲೆ ಅವತರಿಸಿ ದುಷ್ಟರನ್ನು ಶಿಕ್ಷಿಸಿ, ಒಳ್ಳೆಯವರನ್ನು ರಕ್ಷಿಸುತ್ತಾನೆ ಎಂಬುದಕ್ಕೆ ಪೂರಕವಾಗಿ ಶ್ರೀಕೃಷ್ಣ ಭೂಲೋಕದಲ್ಲಿ ಅವತರಿಸಿದ್ದಾನೆ. ಅದರ ಪ್ರತೀಕವಾಗಿ ಕೃಷ್ಣನ ಜನ್ಮದಿನವನ್ನು ಕೃಷ್ಣಾಷ್ಟಮಿ ಎಂದು ಆಚರಿಸುತ್ತೇವೆ. ಮಹಾಭಾರತದ ಕೃಷ್ಣನ ಸಂದೇಶಗಳು ಇಂದಿಗೂ ಅನುಕರಣೀಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಜೈನ ಪೀಠದ ಮುಖ್ಯಸ್ಥ ಡಾ.ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು.
ಸಂಸ್ಕಾರ ಭಾರತೀಯ ಧಾರವಾಡ ಸಮಿತಿಯಿಂದ ವನಿತಾ ಸೇವಾ ಸಮಾಜ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಮಕ್ಕಳ ಕೃಷ್ಣ-ರಾಧೆ ವೇಷ-ಭೂಷಣ ಸ್ಪರ್ಧೆಯ ಗೋಕುಲೋತ್ಸವದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ಭಾರತಿಯ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ, ವನಿತಾ ಸೇವಾ ಸಮಾಜದ ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ಕಾರ್ಯದರ್ಶಿ ಮಧುರಾ ಹೆಗಡೆ, ಪ್ರೌಢ ಶಾಲೆಯ ಶಿಕ್ಷಕಿ ಸುಮಾ ರಜಪೂತ, ಭಾಗೀರಥಿ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ವೇತಾ ಯಜುರ್ವೇದಿ, ಶಿಕ್ಷಕರಾದ ದೀಪಾ ಪಾಟೀಲ, ಭಾಗ್ಯಶ್ರೀ ಮರಲಿಂಗಣ್ಣನವರ, ಪ್ರಸಾದ ಮಡಿವಾಳರ ಇದ್ದರು.
ಡಾ.ಶ್ರೀಧರ ಕುಲಕರ್ಣಿ, ಅಶೋಕ ಮೊಕಾಶಿ, ರವಿ ರಸಾಳಕರ, ಶಿಲ್ಪಾ ಪಾಂಡೆ, ಅವಿನಾಶ ರಸಾಳಕರ, ಮಲ್ಲೇಶ ಹೂಗಾರ ಉಪಸ್ಥಿತರಿದ್ದರು. ಸುಜಾತಾ ಹಡಗಲಿ ಕೃಷ್ಣನ ಬಗ್ಗೆ ಸ್ವ ರಚಿತ ಕವನ ವಾಚಿಸಿದರು. ನೂರಾರು ಮಕ್ಕಳು ಕೃಷ್ಣ-ರಾಧೆ ವೇಷದಲ್ಲಿ ರಂಜಿಸಿದರು. ವೈಶಾಲಿ ರಸಾಳಕರ ಸಂಸ್ಕಾರ ಭಾರತೀಯ ಧ್ಯೇಯಗೀತೆ ಪ್ರಸ್ತುತ ಪಡಿಸಿದರು. ಡಾ.ವೀಣಾ ಬಡಿಗೇರ ಕೃಷ್ಣನ ಗೀತೆ ಹಾಡಿದರು. ವೀರಣ್ಣ ಪತ್ತಾರ ಸ್ವಾಗತಿಸಿದರು. ಡಾ.ಬಿ.ಎಂ. ಶರಭೇಂದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.