

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಶ್ರೀ ಕೃಷ್ಣನ ಜಯಂತಿಗೆ ರ್ನಿಬಂಧಿತ ರಜೆಯ ಬದಲಿಗೆ ಸರ್ಕಾರಿ ರಜೆ ೂಷಿಸಲು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಭರವಸೆ ನೀಡಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸತಿ ಇಲಾಖೆ, ಯಾದವ ೇಮಾಭಿವೃದ್ಧಿ ಸಂವು ಬುಧವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬದುಕಿನ ವಿವಿಧ ಆಯಾಮಗಳನ್ನು ತಿಳಿಸುವ ಭಗವದ್ಗೀತೆ ಒಂದು ವಿಶೇಷವಾದ ಶ್ರೇಷ್ಠ ಗ್ರಂಥ. ಇದರಲ್ಲಿ ಉಲ್ಲೇಖಿತವಾಗಿರುವ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾದುದು. ಇವುಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕೇಂದ್ರದಲ್ಲಿ ಯಾದವ ಶ್ರೀಕೃಷ್ಣ ಸಮುದಾಯ ಭವನ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಸರ್ಕಾರಿ ಜಾಗ ಮಂಜೂರಾತಿ ಇಲ್ಲವೇ ಸಂದ ಜಾಗವನ್ನು ಗುರುತಿಸಬೇಕಾ? ಎಂಬುದರ ಬಗ್ಗೆ ಸಮುದಾಯದ ನಾಯಕರು ಸಲ್ಲಿಸುವ ಮನವಿಯನ್ನಾಧಾರಿಸಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.
ಶಾಸಕ ಪ್ರದಿಪ್ ಈಶ್ವರ್ ಮಾತನಾಡಿ, ದೇಶದ ಜನಸಂಖ್ಯೆಯ ಪೈಕಿ ಶೇ.20ರಷ್ಟು ಯಾದವ ಸಮುದಾಯದವರು ಇದ್ದು, ಯಾವುದೇ ಜನಾಂಗವು ಅಭಿವೃದ್ಧಿ ಹೊಂಸಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಉನ್ನತ ಶಿಣ ಪಡೆಯಬೇಕು ಎಂದರು.
ಸಚಿವರಿಗೆ ರಾಜ್ಯ ಯಾದವ ೇಮಾಭಿವೃದ್ಧಿ ಸಂದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ಡಾ.ಎನ್.ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ತಹಸೀಲ್ದಾರ್ ಅನೀಲ್ ಕುಮಾರ್, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಮನೀಷ್, ರಾಜ್ಯ ಯಾದವ ೇಮಾಭಿವೃದ್ಧಿ ಸಂದ ನಿರ್ದೇಶಕ ದೇವಿಶೆಟ್ಟಹಳ್ಳಿ ಎಂ.ಗಂಗಾಧರ್, ಜಿಲ್ಲಾಧ್ಯ ಆರ್.ವೆಂಕಟೇಶ್, ತಾಲೂಕು ಅಧ್ಯ ವಿ.ಮುನಿಕೃಷ್ಣಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಂ.ಮುನೇಗೌಡ, ಮುಖಂಡರಾದ ನರಸಿಂಹ ಗೌಡ, ಕಿರಗಂಬಿ ದೇವರಾಜ್, ಮುತ್ತರಾಯಪ್ಪ, ಲಕ್ಷ$್ಮಣ್ ಸ್ವಾಮಿ, ಬನ್ನಿಕುಪ್ಪೆ ಶ್ರೀನಿವಾಸ್, ಲಕ್ಷಿ$್ಮ ನರಸಪ್ಪ, ಪ್ರಭಾಕರ್ ಮತ್ತಿತರರು ಇದ್ದರು.
ಪ್ರತಿಭಾ ಪುರಸ್ಕಾರ
ಕಾರ್ಯಕ್ರಮದಲ್ಲಿ ಅರ ದಾಸೋಹದ ಸಹಾಯಕ ನಿರ್ದೇಶಕ ಪಿ.ಎನ್.ನರಸಿಂಹರೆಡ್ಡಿ ಶ್ರೀ ಕೃಷ್ಣ ಜಯಂತಿ ಬಗ್ಗೆ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು.
ಕೃಷ್ಣನ ಮೆರವಣಿಗೆ
ಕಾರ್ಯಕ್ರಮಕ್ಕೂ ಮೊದಲು ಶ್ರೀ ಕೃಷ್ಣನ ಮೂರ್ತಿಯನ್ನೊಳಗೊಂಡ ಹೂವಿನ ಪಲ್ಲಕ್ಕಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದವು. ಸಮುದಾಯದ ಮುಖಂಡರು, ಇಲಾಖೆಯ ಅಧಿಕಾರಿಗಳು ಕಾಲ್ನಡಿಗೆಯಲ್ಲಿ ಸಾಗಿದರು. ಇದಕ್ಕೆ ಜಾನಪದ ವಿವಿಧ ಕಲಾ ತಂಡಗಳು ಸಾಥ್ ನೀಡಿದವು.