

ಕಡಬ: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣಪ್ಪ ದೇವಾಡಿಗ ಸನಿಲ ಹಾಗೂ ಉಪಾಧ್ಯಕ್ಷರಾಗಿ ಚಿದಾನಂದ ಕೊಡೆಂಕಿರಿ ಅವಿರೋಧ ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕರುಗಳಾದ ಶಶಾಂಕ ಗೋಖಲೆ, ಜಯಚಂದ್ರ ರೈ ಕುಂಟೋಡಿ, ಶಿವಪ್ರಸಾದ್ ಪುತ್ತಿಲ, ಅಚ್ಚುತ್ತ ದೇರಾಜೆ, ಶ್ರೀಧರ ಎಸ್.ಎನ್., ಶಿವಪ್ರಸಾದ್ ಮೈಲೇರಿ, ಯೋಗೇಂದ್ರ ಕುಮಾರ್ ಬಿ.ಎಸ್., ಫಕೀರ, ಲೀಲಾವತಿ ದೇವಯ್ಯ ಗೌಡ ಪನ್ಯಾಡಿ, ಶಕಿಲಾ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿಯಾಗಿ ಪ್ರದೀಪ್, ವಲಯ ಮೇಲ್ವಿಚಾರಕರು, ಪಂಜ ವಲಯ ಉಪಸ್ಥಿತರಿದ್ದರು. ಪುತ್ತೂರು ಉಪವಿಭಾಗದ ಮಾರಾಟಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಶೋಭಾ ಎನ್.ಎಸ್.ಅವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನೆರವೇರಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ ಎಂ.ಕೆ ಸ್ವಾಗತಿಸಿದರು, ಸಂಘದ ಸಿಬ್ಬಂದಿ ಸಹಕರಿಸಿದರು. ಭಾರತೀಯ ಜನತಾ ಪಕ್ಷದ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀಕೃಷ್ಣ ಎಂ.ಆರ್., ಪುಲಸ್ತ್ಯಾ ರೈ, ಭಾಸ್ಕರ ಗೌಡ ಇಚಿಲಂಪಾಡಿ, ಸುರೇಶ್ ದೇಂತಾರು, ಲಕ್ಷ್ಮೀಶ ಬಂಗೇರ, ಕಿರಣ್ ಗೋಗಟೆ, ಅಜಿತ್ ರೈ ಆರ್ತಿಲ, ದೇವಯ್ಯ ಪನ್ಯಾಡಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.