ಜಾನಪದ ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ

IMG-20240818-WA0007
Published on

ಉಡುಪಿ : ವಿಡಿಯೋಗೇಮ್​, ವರ್ಚುವಲ್​ ಗೇಮ್​ಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. ಹೀಗಾಗಿ ಲಗೋರಿ, ಕಬಡ್ಡಿ , ಚೆನ್ನಮಣೆ ಮುಂತಾದ ಜಾನಪದ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀಕೃಷ್ಣ ಮಾಸೋತ್ಸವ ಅಂಗವಾಗಿ ಭಾನುವಾರ ರಥಬೀದಿಯಲ್ಲಿ ಕನಕ ಗೋಪುರ ಮುಂಭಾಗ ಸಾಂಪ್ರದಾಯಿಕ ಕ್ರೀಡೋತ್ಸವ ಉದ್ಘಾಟಿಸಿ ಅವರು ಅಶೀರ್ವಚನ ನೀಡಿದರು.

ಶ್ರೀಕೃಷ್ಣ ಅವತಾರ ಲೀಲೆಗಳಿಗೆ ಪ್ರಸಿದ್ಧವಾಗಿದ್ದು, ಜನ್ಮಾಷ್ಟಮಿ ಸಂದರ್ಭದಲ್ಲಿ ಕ್ರೀಡೆಗಳನ್ನು ನಡೆಸುವುದು ಪುಣ್ಯಪ್ರದ ಕಾರ್ಯ ಎಂದರು.

ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಮಾತನಾಡಿದರು. ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಶಾಸಕ ಯಶ್​ಪಾಲ್​ ಸುವರ್ಣ ಮತ್ತು ಮಾಜಿ ಶಾಸಕ ರುಪತಿ ಭಟ್​ ಶುಭ ಹಾರೈಸಿದರು. ಉದ್ಯಮಿ ರಂಜನ್​ ಕಲ್ಕೂರ, ಪುತ್ತಿಗೆ ಮಠದ ದಿವಾನ್​ ನಾಗರಾಜ ಆಚಾರ್ಯ, ಪ್ರಮುಖರಾದ ರಮೇಶ್​ ಭಟ್​, ಮಹಿತೋಷ್​ ಆಚಾರ್ಯ, ರಾಮಚಂದ್ರ ಉಪಾಧ್ಯಾಯ, ಕ್ರೀಡಾಕೂಟ ಸಂಚಾಲಕ ಈಶ್ವರ ಚಿಟ್ಪಾಡಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net