ಕೃಷ್ಣಮೂರ್ತಿ ಶ್ರೇಷ್ಠ ವಿದ್ವಾಂಸರು

13 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಕೆ. ಕೃಷ್ಣಮೂತಿರ್ಯವರು ಪ್ರತಿಭೆ ಮತ್ತು ಪಾಂಡಿತ್ಯಗಳ ಆಗರವಾಗಿದ್ದರು. ಇವೆರಡನ್ನು ಸಮಸಮವಾಗಿ ಮೈಗೂಡಿಸಿಕೊಂಡ ಶ್ರೇಷ್ಠ ವಿದ್ವಾಂಸರಾಗಿದ್ದರು ಎಂದು ಕರ್ನಾಟಕ ಸಂಸತ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂ ಹಾಗೂ ಡಾ. ಕೆ. ಕೃಷ್ಣಮೂತಿರ್ ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಡಾ. ಕೆ. ಕೃಷ್ಣಮೂತಿರ್ಯವರ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ, ಇಂಗ್ಲಿಷ್​, ಸಂಸತ ಹೀಗೆ ಬಹುಭಾಷಾ ತರಾಗಿದ್ದರು. ಹೀಗಾಗಿ ಅವರಿಗೆ ವಿದ್ವತ್ತಿನ ಸಮುದ್ರದಲ್ಲಿ ಲೀಲಾಜಾಲವಾಗಿ ಈಜಾಡಲು ಸಾಧ್ಯವಾಯಿತು. ಆನಂದವರ್ಧನನ ಧ್ವನ್ಯಾಲೋಕ ಕುರಿತ ಸಂಶೋಧನ ಮಹಾಪ್ರಬಂಧ ಭಾರತೀಯ ಸಂಶೋಧನಾ ಮಹಾಪ್ರಬಂಧಗಳಲ್ಲಿಯೇ ಅತ್ಯಂತ ಮೌಲಿಕವಾದದ್ದು ಎಂದು ಪರಿಗಣಿಸಲ್ಪಟ್ಟಿದೆ. ಸಂಸತದ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟ ಹೆಗ್ಗಳಿಕೆ ಕೃಷ್ಣಮೂತಿರ್ಯವರಿಗೆ ಸಲ್ಲುತ್ತದೆ. ಅವರು ವಿದ್ವತ್​ ಲೋಕದ ಪುಣ್ಯಪುರುಷರಾಗಿದ್ದರಲ್ಲದೆ ವಿದ್ವತ್​ ಪ್ರಪಂಚದ ಮಾರ್ತಾಂಡ (ಸೂರ್ಯ) ಎನಿಸಿದ್ದರು.
ಡಾ. ಕೇಯೂರ ಕರಗುದರಿ ಡಾ. ಕೆ. ಕೃಷ್ಣಮೂತಿರ್ ಅವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಿ, ಕೃಷ್ಣಮೂತಿರ್ ಅವರು ಬಡತನದಲ್ಲಿ ಓದಿ ಅನೇಕ ಕಡೆಗಳಲ್ಲಿ ಸಂಸತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಕವಿವಿ ಸಂಸತ ವಿಭಾಗ ಬೆಳೆಸಿ ನೂರಾರು ವಿದ್ಯಾಥಿರ್ಗಳನ್ನು ತಯಾರು ಮಾಡಿದರು. ಅನೇಕ ಶಾಸ್ತ್ರ ವಿಷಯಗಳನ್ನು ಬಲ್ಲವರಾಗಿದ್ದ ಅವರು, ಯಾವುದೇ ಕೃತಿಗಳನ್ನು ರಚಿಸುವಾಗ ಮೂಲ ಆಕರಗಳನ್ನು ಆಧಾರವಾಗಿ ಕೊಡುತ್ತಿದ್ದರು. ಅವರ ವಿದ್ವತ್​ ತುಂಬ ವಿಶಿಷ್ಟವಾಗಿತ್ತು ಎಂದರು.
ಡಾ. ಕೆ. ಕೃಷ್ಣಮೂತಿರ್ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕಿ ಡಾ. ಕೆ. ಲೀಲಾ ಸಂವಾದ ನಡೆಸಿಕೊಟ್ಟರು. ಡಾ. ಶ್ರೀಧರಶಾಸ್ತ್ರಿ ಇನಾಂದಾರ, ಡಾ. ಪದ್ಮಾವತಿ ಸಿಂಗಾರಿ, ರವೀಂದ್ರಕುಮಾರ, ವಿ. ಎಸ್​. ಚೇತನಾ ಭಾಗವಹಿಸಿದ್ದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯತೆ ವಹಿಸಿದ್ದರು.
ಡಾ. ಶಾಮಸುಂದರ ಬಿದರಕುಂದಿ, ಹನುಮಾ ಗೋಗಿ, ಮನೋಹರ, ಪ್ರಣಿತಕುಮಾರು, ಸಿ.ಎನ್​. ಕೇಶವಪ್ರಕಾಶ, ಮನೋಹರ, ಬಿ. ಎಸ್​. ಶಿರೋಳ, ಡಾ. ಶಶಿಧರ ನರೇಂದ್ರ, ಕೆ. ಕೃಷ್ಣಮೂತಿರ್ ಕುಟುಂಬಸ್ಥರು, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಡಾ. ಸಂಜೀವ ಕುಲಕಣಿರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net