ಕೃಷ್ಣಮೂರ್ತಿ ವಿಚಾರಣೆ 29ಕ್ಕೆ ಮುಂದೂಡಿಕೆ

ex naxlaite leader b.g.krishamurthy
ವಿಚಾರಣೆ ಎದುರಿಸಿ ನ್ಯಾಯಾಲಯದಿಂದ ಹೊರಬಂದ ನಕ್ಸಲ್ ಮಾಜಿ ನಾಯಕ ಬಿ.ಜಿ.ಕೃಷ್ಣಮೂರ್ತಿಯನ್ನು ಪೊಲೀಸರು ಕರೆದೊಯ್ದರು.
Published on

ಶಿವಮೊಗ್ಗ: ನಕ್ಸಲ್ ಮಾಜಿ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರ ಮೇಲಿರುವ ಆಗುಂಬೆ ಠಾಣಾ ವ್ಯಾಪ್ತಿಯ ಬಸ್ ಸುಟ್ಟ ಪ್ರಕರಣದ ವಿಚಾರಣೆಯನ್ನು ಗುರುವಾರ ಶಿವಮೊಗ್ಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಫೆ.29ಕ್ಕೆ ಮುಂದೂಡಿತು.

2021ರಲ್ಲಿ ಆಗುಂಬೆ ಠಾಣೆ ವ್ಯಾಪ್ತಿಯ ಹೊಸಗದ್ದೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರ ಬಳಿ ಸಾಕ್ಷಿದಾರರು ಮಾಡಿರುವ ಆರೋಪ ಸುಳ್ಳು ಎಂಬ ಹೇಳಿಕೆಯನ್ನು ಕೃಷ್ಣಮೂರ್ತಿ ನೀಡಿದ್ದು, ಹಾಗಾಗಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು ಎನ್ನಲಾಗಿದೆ.
14 ವರ್ಷಗಳ ಹಿಂದಿನ 5 ಪ್ರಕರಣಗಳಲ್ಲಿ 3 ಚಾರ್ಜ್‌ಶೀಟ್ ಹಾಕಲಾಗಿದೆ. ಇನ್ನೆರೆಡು ಎಫ್‌ಐಆರ್ ಹಂತದಲ್ಲಿದ್ದು ಬಾಡಿ ವಾರೆಂಟ್ ಆಧಾರದ ಮೇಲೆ ಶಿವಮೊಗ್ಗ ನ್ಯಾಯಾಲಯಕ್ಕೆ ಕೃಷ್ಣಮೂರ್ತಿಯನ್ನು ಹಾಜರುಪಡಿಸಲಾಗಿತ್ತು. ಶುಕ್ರವಾರ ಬೆಳಗ್ಗೆ ಪುನಃ ಅವರನ್ನು ಕೇರಳದ ತ್ರಿಶೂರ್ ಜೈಲಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಆರೋಪಿ ಪರ ವಕೀಲ ಕೆ.ಪಿ.ಶ್ರೀಪಾಲ್ ತಿಳಿಸಿದ್ದಾರೆ.
2021ರ ನವೆಂಬರ್‌ನಲ್ಲಿ ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಬಂಧಿಸಿದ್ದರು. ಶಿವಮೊಗ್ಗದಲ್ಲಿ ಮೂರು ಸೇರಿ ಒಟ್ಟಾರೆ ರಾಜ್ಯದಲ್ಲಿ 62 ಪ್ರಕರಣಗಳು ಕೃಷ್ಣಮೂರ್ತಿ ಮೇಲಿದ್ದು, ಕೇರಳದಲ್ಲೂ ನಾಲ್ಕು ಪ್ರಕರಣಗಳು ದಾಖಲಾಗಿವೆ. ಬುಧವಾರ ಆಗುಂಬೆ ಾರೆಸ್ಟ್ ಗೇಟ್ ಧ್ವಂಸ ಮತ್ತು ಬಿದರಗೂಡು ಅರುಣ್ ಎಂಬುವರ ಮನೆ ದರೋಡೆ ಪ್ರಕರಣ ಕುರಿತು ವಿಚಾರಣೆ ಎದುರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net