ಮೂರು ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣ

Deadline for purchasing FAQ sunflowers
Published on

ಜಮಖಂಡಿ;ನೀರಿನಿಂದ ಶ್ರೀಮಂತಿಕೆ ಬರುತ್ತದೆ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೆ ಮುಂದಿನ ಮೂರೇ ವರ್ಷದಲ್ಲಿ 3ನೇ ಹಂತದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸುತ್ತೇವೆ ಎಂದು ಕಾನೂನು ಸಚಿವ ಎಚ್​.ಕೆ. ಪಾಟೀಲ ಹೇಳಿದರು.ತಾಲೂಕಿನ ತುಂಗಳ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಲಕ್ಷಿ$್ಮ&ವೆಂಕಟೇಶ್ವರ ದೇವಸ್ಥಾನ ನೂತನ ಗೋಪುರ, ಕಲಶಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬರದ ನಾಡಾಗಿದ್ದ ಈ ಭಾಗ ನೀರಾವರಿ ಯೋಜನೆಗಳಿಂದ ಇಂದು ಸಮೃದ್ಧ ನಾಡಾಗಿದೆ. ರೈತರ ಬದುಕು ಅಭಿವೃದ್ಧಿಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದ 12.5 ಲ ಎಕರೆ ಪ್ರದೇಶ ಜಮಿನು ನೀರಾವರಿಯಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್​.ಬಿ. ತಿಮ್ಮಾಪೂರ ಮಾತನಾಡಿ, "ಬೀಗರು ದೂರ ಇರಬೇಕು, ನೀರು ಸಮೀಪ ಇರಬೇಕು' ಎಂಬ ಗಾದೆ ಇದೆ. ಆದರೆ ತುಂಗಳ ಗ್ರಾಮಕ್ಕೆ ಬೀಗರೇ ನೀರು ತಂದುಕೊಟ್ಟಿದ್ದಾರೆ. ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ ನೀರಾವರಿ ಜಮೀನಿಗೆ 40 ಲ ರೂ., ಒಣ ಬೇಸಾಯ ಭೂಮಿಗೆ 30 ಲ ರೂ., ಪರಿಹಾರ ನಿಗದಿಪಡಿಸಿದೆ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣ ಮಾಡುವ ಯೋಜನೆ ಇದಾಗಿದೆ ಎಂದರು.ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಕಷ್ಣಾ ಮೇಲ್ದಂಡೆ ಯೋಜನೆ ೂಷಣೆ ಮಾಡಿದರೆ ಮಾತ್ರ ಸಾಲದು ಅದನ್ನು ಯಾವ ದಿನಾಂಕದಲ್ಲಿ ಪೂರ್ಣಗೊಳಿಸುತ್ತಿರಿ? ಅದನ್ನು ರೈತರಿಗೆ ತಿಳಿಸುವ ಕಾರ್ಯ ಆಗಬೇಕು ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ, ಮಾತನಾಡಿ, ತುಂಗಳ ಭಾಗವನ್ನು ಸಂಪೂರ್ಣ ನೀರಾವರಿ ಯೋಜನೆಗೆ ಒಳಪಡಿಸಬೇಕು. ತುಬಚಿಯಿಂದ ತುಂಗಳವರೆಗೆ ನೀರು ಸರಬರಾಜು ಮಾಡಲು 35 ಕೋಟಿ ರೂ. ವೆಚ್ಚದ ಯೋಜನೆ ಅನುಮೋದನೆ ಆಗುವುದಿದೆ. ಸಣ್ಣ ನೀರಾವರಿ ಇಲಾಖೆ ಈಗಾಗಲೇ ಸರ್ವೇ ಕಾರ್ಯಮಾಡಿದೆ ಎಂದರು.ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿದರು. ಕಾಡಸಿದ್ಧೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಸಿದ್ಧಲಿಂಗ ಶಾಂಭವಿ ಆಶ್ರಮದ ಅನುಸೂಯಾ ತಾಯಿಯವರು, ರಾಜಯೋಗಿನಿ ಬಿ.ಕೆ. ವೆಷ್ಣವಿ ಅಕ್ಕನವರು, ಅರ್ಚಕ ಶಂಕರ ಕುಲಕರ್ಣಿ ಸಾನ್ನಿಧ್ಯವಹಿಸಿದ್ದರು.

ಶ್ರೀಶೈಲ ದಳವಾಯಿ, ಸುಶೀಲ ಬೆಳಗಲಿ, ರಾಹುಲ ಕಲೂತಿ, ಯೋಗಪ್ಪ ಸವದಿ, ದಯಾನಂದ ಪಾಟೀಲ, ಮುತ್ತಣ್ಣ ಹಿಪ್ಪರಗಿ, ಕಲ್ಲಪ್ಪ ಗಿರಡ್ಡಿ, ವರ್ಧಮಾನ ನ್ಯಾಮಗೌಡ, ಅರ್ಜುನ ದಳವಾಯಿ, ಸದುಗೌಡ ಪಾಟೀಲ, ಅರುಣಕುಮಾರ ಶಹಾ, ಕೀರಸಾಬ ಬಾಗವಾನ ಇದ್ದರು. ಬಸಗೊಂಡ ಕನ್ನಾಳ ಸ್ವಾಗತಿಸಿದರು, ಡಾ. ಟಿ.ಪಿ. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗಾಯತ್ರಿ ನೀಲಗುಂದ ನಿರೂಪಿಸಿದರು, ಶಿವಾನಂದ ಜೀವಾಪುರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net