ಕೃಷ್ಣ ಪೈ ಸ್ಮರಣಾಂಜಲಿ ಕಾರ್ಯಕ್ರಮ

New Project
Published on

ಕಾಸರಗೋಡು: ಬದಿಯಡ್ಕದಲ್ಲಿ ಕೇರಳ ರಾಜ್ಯ ಕನ್ನಡ ಚುಸಾಪ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿ.ಬಿ.ಕೃಷ್ಣ ಪೈ ಅವರ ಸ್ಮರಣಾಂಜಲಿ ಕಾರ್ಯಕ್ರಮ ನಡೆಯಿತು.

ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ ಗೋಪಾಲಕೃಷ್ಣ ಭಟ್ ಸಂಸ್ಮರಣಾ ಭಾಷಣ ಮಾಡಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ವೈದ್ಯ ಡಾ.ಶ್ರೀನಿಧಿ ಸರಳಾಯ, ಕನ್ನಡ ಭವನ ಕಾರ್ಯದರ್ಶಿ ವಸಂತ ಕೆರೆಮನೆ ಉಪಸ್ಥಿತರಿದ್ದರು.

ಪರಿಷತ್ತಿನ ಕೇಂದ್ರ ಸಮಿತಿ ಸ್ಥಾಪಕ ಸಂಚಾಲಕ ಡಾ.ಕೆ.ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣ ಪೈ ಅವರ ಪುತ್ರ ಗಣೇಶ ಪೈ ದಂಪತಿಯನ್ನು ಅಭಿನಂದಿಸಲಾಯಿತು. ಬಳಿಕ ಸಾಹಿತಿ ವಿರಾಜ್ ಅಡೂರು ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಿತು. ಲಕ್ಷ್ಮಿ ಜಿ.ಪೈ, ಬಿ.ಉನ್ನತಿ ಪೈ ಹಾಗೂ ತೇಜಸ್ ಪೈ ಅವರಿಂದ ಗೀತೆಗಳ ಗಾಯನ ನಡೆಯಿತು. ಬದಿಯಡ್ಕ ಗಣೇಶ ಪೈ ಸ್ವಾಗತಿಸಿದರು. ಪ್ರೊ.ಲತಾ ಪ್ರಕಾಶ ರಾವ್ ನಿರೂಪಿಸಿದರು. ಶಾರದಾ ಮೊಳೆಯಾರ್ ಎಡನೀರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net