ಕೃಷ್ಣೆಯಲ್ಲಿ ಅಲ್ಪ ತಗ್ಗಿದ ಹೊರಹರಿವು

3LNG01-A
Published on

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 30 ಕ್ರಸ್ಟ್‌ಗೇಟ್‌ಗಳ ಮೂಲಕ 2,85,820 ಕ್ಯೂಸೆಕ್ ನೀರನ್ನು ಶುಕ್ರವಾರ ಹರಿಬಿಡಲಾಯಿತು. ತಾಲೂಕಿನ ಜಲದುರ್ಗ ಕೋಟೆ ಬಳಿ ನದಿ ಹರಿಯುವ ದೃಶ್ಯ ಕಣ್ಮನ ಸೆಳೆಯುತ್ತಿದೆ.

ಆಲಮಟ್ಟಿ ಅಣೆಕಟ್ಟೆಯಿಂದ ಬಸವಸಾಗರ ಜಲಾಶಯಕ್ಕೆ 3 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬಸವಸಾಗರ ಜಲಾಶಯದ ಗರಿಷ್ಠ ನೀರಿನ ಸಾಮರ್ಥ್ಯ 492.252 ಮೀ. (33.313 ಟಿಎಂಸಿ) ಇದ್ದು, ಶುಕ್ರವಾರದ ನೀರಿನ ಮಟ್ಟ 489.92 ಮೀ. (23.714 ಟಿಎಂಸಿ) ಇತ್ತು. ಬುಧವಾರ ಮತ್ತು ಗುರುವಾರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3.22 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಶುಕ್ರವಾರ ನದಿಗೆ ಹರಿಬಿಡುವ ನೀರಿನ ಪ್ರಮಾಣ 35 ಸಾವಿರ ಕ್ಯೂಸೆಕ್ ಇಳಿಮುಖಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net