

ಉಡುಪಿ: ಕೃಷ್ಣ ಮಠದಲ್ಲಿ ಕಡಿಯಾಳಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ ಸಹಕಾರದಲ್ಲಿ ಡಿ.31ರಂದು ವಿಷ್ಣ್ಣು ಸಹಸ್ರ ನಾಮಾವಳಿ ಪಠಣ ಸಹಿತ ಕೋಟಿ ತುಳಸಿ ಅರ್ಚನೆ ನಡೆಯಲಿದೆ ಎಂದು ತುಶಿಮಾಮ ಕಾರ್ಯಾಧ್ಯಕ್ಷ ಪ್ರದಿಪ್ ಕುಮಾರ್ ಕಲ್ಕೂರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾನುವಾರ ಬೆಳಗ್ಗೆ 7.30ಕ್ಕೆ ಮೆರವಣಿಗೆಯ ಮೂಲಕ ಶ್ರೀ ಕೃಷ್ಣನ ಮೂರ್ತಿಯನ್ನು ತಂದು ರಾಜಾಂಗಣದ ಪುಷ್ಪಾಲಂಕೃತ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗುವುದು. ನಂತರ ಪರ್ಯಾಯ ಮಠಾಧೀಶ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಅರ್ಚನೆಗೆ 2500 ಮಂದಿ ವೈದಿಕರು ಭಾಗವಹಿಸುವ ನಿರೀೆ ಇದೆ. ಕೃಷ್ಣನಿಗೆ ತುಳಸಿ ಕೊಡಲು ಬಯಸುವವರು ಡಿ.30ರಂದು ಕೃಷ್ಣ ಮಠಕ್ಕೆ ತಂದೊಪ್ಪಿಸಬೇಕು ಎಂದು ತಿಳಿಸಿದರು.
ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಈ ದಿವ್ಯ ಕೈಂಕರ್ಯ ರ್ನಿವಿಘ್ನವಾಗಿ ನಡೆದು ಲೋಕ ಕಲ್ಯಾಣಕ್ಕೆ ನಾಂದಿಯಾಗಲಿ ಎಂಬ ಸದುದ್ದೇಶದೊಂದಿಗೆ ಈ ಅರ್ಚನೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ತುಶಿಮಾಮ ಅಧ್ಯಕ್ಷ ರುಪತಿ ಉಪಾಧ್ಯ, ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕೃಷ್ಣಮೂರ್ತಿ ಆಚಾರ್ಯ, ಗೌರವ ಅಧ್ಯಕ್ಷ ಅರವಿಂದ ಆಚಾರ್ಯ, ಗೌರವ ಸಲಹೆಗಾರ ರಂಜನ್ ಕಲ್ಕೂರ, ಶ್ರೀಶ ಕಡೆಕಾರ್ ಉಪಸ್ಥಿತರಿದ್ದರು.