ಆ.1ರಿಂದ ಸೆ. 17ರವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ

udp-puttige sri
Published on

ಉಡುಪಿ: ಕೃಷ್ಣ ಮಠದಲ್ಲಿ ನಾಡಹಬ್ಬ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.1ರಿಂದ ಸೆ.17ರವರೆಗೆ ವಿವಿಧ ಸ್ಪರ್ಧೆ, ಭಜನಾ ಕಮ್ಮಟ, ಧಾರ್ಮಿಕ ಪ್ರವಚನ, ವಿಚಾರ ಸಂಕಿರಣ ಸಹಿತ ವಿವಿಧ ಧಾರ್ಮಿಕ ಮತ್ತು ಸಾಂಸತಿಕ ಕಾರ್ಯಕ್ರಮಗಳೊಂದಿಗೆ 48 ದಿನ ವೃಶಿಷ್ಟ$್ಯಪೂರ್ಣ ಮಂಡಲೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 25ರಂದು ಸಾಯಂಕಾಲ 4.30ಕ್ಕೆ ಮಂಡಲೋತ್ಸವಕ್ಕೆ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್​ ಚಾಲನೆ ನೀಡಲಿದ್ದಾರೆ. ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದರು. ಆ. 1ರಂದು ಸಾರ್ವಜನಿಕ ಲಕ್ಷಿ$್ಮ ಶೋಭಾನೆ ಪಠಣ, 2ರಂದು ಬನ್ನಂಜೆ ವಿಚಾರಧಾರೆ ಸಂಸ್ಮರಣಾ ಕಾರ್ಯಕ್ರಮ, 3ರಂದು ಯೋಗ ಶಿಬಿರ, 8ರಂದು ವರ ಮಹಾಲಕ್ಷಿ$್ಮ ಪೂಜೆ, 11ರಂದು ರಾವೇಂದ್ರ ಸ್ವಾಮಿಗಳ ಆರಾಧನೆ, 13ರಂದು ಲಡ್ಡೂತ್ಸವ ಉದ್ಘಾಟನೆ ನಡೆಯಲಿದೆ.

15ರಂದು ಚಾಂದ್ರ ಕೃಷ್ಣಾಷ್ಟಮಿ

ಆ.15ರಂದು ಚಾಂದ್ರ ಕೃಷ್ಣಾಷ್ಟಮಿ ಆಚರಿಸಲಾಗುತ್ತಿದ್ದು, ರಾಮಜನ್ಮಭೂಮಿ ಟ್ರಸ್ಟ್​ ಕೋಶಾಧಿಕಾರಿ ಶ್ರೀ ಗೋವಿಂದದೇವ ಗಿರಿ ಮಹಾರಾಜ್​ ಗೀತೋತ್ಸವ ಉದ್ಘಾಟಿಸಲಿದ್ದಾರೆ. ರಾತ್ರಿ ಮಠದಲ್ಲಿ ಅಘ್​ಯ ಪ್ರದಾನ ನಡೆಯಲಿದೆ.

ಸೆ.14ರಂದು ಸೌರ ಕೃಷ್ಣ ಜನ್ಮಾಷ್ಟಮಿ

ಸೆ. 14ರಂದು ಸೌರ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದ್ದು, ಬೆಳಗ್ಗೆ ಮುದ್ದುಕೃಷ್ಣ ಸ್ಪರ್ಧೆ ಆಯೋಜಿಸಲಾಗಿದೆ. ಸಾಯಂಕಾಲ ನಡೆಯುವ ಜನ್ಮಾಷ್ಟಮಿ ಸಭಾ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್​. ಎನ್​. ರವಿ ಭಾಗವಹಿಸಲಿದ್ದಾರೆ. ರಾತ್ರಿ ವಿಶೇಷ ಪೂಜೆ ಹಾಗೂ ಅರ್ಗ್ಯ ಪ್ರದಾನ ಜರಗಲಿದೆ. 15ರಂದು ಶ್ರೀಕೃಷ್ಣ ಲೀಲೋತ್ಸವ ಅಂಗವಾಗಿ ಸಾಯಂಕಾಲ 3 ಗಂಟೆಗೆ ರಥಬೀದಿಯಲ್ಲಿ ಮುಂಬೈ ಆಲಾರೆ ತಂಡ, ಹುಲಿವೇಷ, ಜಾನಪದ ನೃತ್ಯಗಳೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. 16ರಂದು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. 17ರಂದು ಮಂಡಲೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಶ್ರೀಗಳು ಹೇಳಿದರು. ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ದಿವಾನ್​ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ್​ ತಂತ್ರಿ, ರಮೇಶ್​ ಭಟ್​, ರಮಣಾಚಾರ್ಯ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net