

ಉಡುಪಿ: ಕೃಷ್ಣ ಮಠದಲ್ಲಿ ಸೋಮವಾರ ಉತ್ಥಾನ ದ್ವಾದಶೀ ಪ್ರಯುಕ್ತ ತುಳಸೀಪೂಜೆ, ಲಕ್ಷದಿಪೋತ್ಸವ ಮತ್ತು ರಥೋತ್ಸವ ಸಂಭ್ರಮದಿಂದ ನಡೆಯಿತು. ಮಧ್ಯಾಹ್ನ ರಥಬೀದಿಯಲ್ಲಿ ಲದೀಪೋತ್ಸವಕ್ಕಾಗಿ ಹಣತೆಯನ್ನಿಡುವ ಕಾರ್ಯಕ್ಕೆ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ನವಗ್ರಹ ಪೂಜೆ, ನವಗ್ರಹ ದಾನದ ಬಳಿಕ ಸಾಯಂಕಾಲ 6.35ಕ್ಕೆ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ನೂರಾರು ಭಕ್ತರು ಹಚ್ಚಿದ ಹಣತೆ ಬೆಳಕಿನಲ್ಲಿ ರಥಬೀದಿ ಕಂಗೊಳಿಸುತ್ತಿತ್ತು.
ತುಳಸೀ ಪೂಜೆ
ಕೃಷ್ಣಮಠದಲ್ಲಿ 1 ತಿಂಗಳ ಪರ್ಯಂತ ನಡೆದ ಪಶ್ಚಿಮ ಜಾಗರ ಪೂಜೆ ಸಂಪನ್ನಗೊಂಡಿತು. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸೀ ಪೂಜೆ ನೆರವೇರಿಸಿದರು.
ಕ್ಷೀರಾಬ್ಧಿ ಪೂಜೆ
ಸಾಯಂಕಾಲ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಿತು. ಪರ್ಯಾಯ ಉಭಯ ಶ್ರೀಗಳು ತುಳಸೀ ಮತ್ತು ನೆಲ್ಲಿಗಿಡದ ಬುಡದಲ್ಲಿಟ್ಟಿದ್ದ ತೆಂಗಿನ ಹೋಳಿನಲ್ಲಿ ರಾಬ್ದಿ ಅ್ಯರ್ ಪ್ರದಾನ ಮಾಡಿದರು. ಈ ಮೂಲಕ ಚಾತುರ್ಮಾಸ್ಯದ ವೃತವನ್ನು ದೇವರಿಗೆ ಸಮರ್ಪಿಸಿದರು.