ನ.13ರಿಂದ ಕೃಷ್ಣ ಮಠದಲ್ಲಿ ಲಕ್ಷದಿಪೋತ್ಸವ

udp-12-lakshadeepa 2A
Published on

ಉಡುಪಿ: ಕೃಷ್ಣ ಮಠದಲ್ಲಿ ನ.13ರಿಂದ ಲಕ್ಷದಿಪೋತ್ಸವ ಸಂಭ್ರಮದೊಂದಿಗೆ ರಥೋತ್ಸವಗಳಿಗೆ ಚಾಲನೆ ದೊರೆಯಲಿದೆ.

ಭಾಗೀರಥಿ ಜಯಂತಿಯಂದು ಗರ್ಭಗುಡಿ ಸೇರಿದ ಕೃಷ್ಣನ ಉತ್ಸವ ಮೂರ್ತಿ ಉತ್ಥಾನ ದ್ವಾದಶಿಯಂದು ರಥವನ್ನೇರಲಿದೆ. ಬುಧವಾರ ಮಧ್ಯಾಹ್ನ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಮಠಾಧೀಶರು ಹಣತೆ ಮುಹೂರ್ತ ನೆರವೇರಿಸಲಿದ್ದಾರೆ. ಸಾಯಂಕಾಲ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಲಿದ್ದು, ಮಠಾಧೀಶರು ತಮ್ಮ ಪಟ್ಟದ ದೇವರಿಗೆ ಅ್ಯರ್ ಪ್ರದಾನ ಮಾಡಲಿದ್ದಾರೆ. ರಾತ್ರಿ 7 ಗಂಟೆಗೆ ಮಠದಲ್ಲಿ ಉತ್ಸವ ಮುಹೂರ್ತ ಧಾರ್ಮಿಕ ವಿಧಿ ನಡೆಯಲಿದ್ದು, ನವಗ್ರಹ ಪೂಜೆ, ನವಗ್ರಹ ದಾನದ ನಂತರ ರಥೋತ್ಸವ ಪ್ರಾರಂಭವಾಗಲಿದೆ. ನ.16ರವರೆಗೆ 4 ದಿನ ಲಕ್ಷದಿಪೋತ್ಸವ ನಡೆಯಲಿದೆ.

*ತುಳಸೀ ಪೂಜೆ ಸಂಪನ್ನ

ಕೃಷ್ಣ ಮಠದಲ್ಲಿ ದೀಪಾವಳಿ ಪಾಡ್ಯದಿಂದ ಪ್ರಾರಂಭವಾದ ತುಳಸೀ ಪೂಜೆ ಉತ್ಥಾನ ದ್ವಾದಶಿಯಾದ ಬುಧವಾರ ಸಂಪನ್ನಗೊಳ್ಳಲಿದೆ. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 5 ಗಂಟೆಗೆ ಕೊನೆಯ ಪಶ್ಚಿಮ ಜಾಗರಪೂಜೆ ನಡೆಯಲಿದ್ದು, ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ.

*ಖರೀದಿ ಭರಾಟೆ

ಉತ್ಥಾನ ದ್ವಾದಶಿ ತುಳಸೀ ಪೂಜೆ ಹಿನ್ನೆಲೆಯಲ್ಲಿ ಮಂಗಳವಾರ ರಥಬೀದಿಯಲ್ಲಿ ಹೂ, ಹಣ್ಣು ಮತ್ತು ನೆಲ್ಲಿಗಿಡ ಖರೀದಿ ಭರಾಟೆ ಜೋರಾಗಿತ್ತು. ಚಿಕ್ಕಮಗಳೂರು, ಹಾಸನ ಮೊದಲಾದ ಕಡೆಗಳಿಂದ ಆಗಮಿಸಿದ್ದ ವರ್ತಕರು ನಗರದ ವಿವಿಧೆಡೆ ಹೂ ಮಾರಾಟದಲ್ಲಿ ತೊಡಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net