

ಉಡುಪಿ: ತುಳಸೀ ಇಲ್ಲದ ಪೂಜೆಯನ್ನು ಒಲ್ಲನೋ ಹರಿ ಒಲ್ಲನೋ ಎಂಬ ದಾಸವಾಣಿಯಂತೆ ಕೃಷ್ಣ ದೇವರಿಗೆ ತುಳಸೀ ಅತೀಪ್ರಿಯವಾಗಿದ್ದು, ಲೋಕಕಲ್ಯಾಣಾರ್ಥವಾಗಿ ಮಾಡಿದ ಅರ್ಚನೆ ದೇವರಚಿತ್ತಕ್ಕೆ ಬರಲಿದೆ ಎಂದು ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.
ಕೃಷ್ಣಮಠದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಲ ಅಂಗಸಂಸ್ಥೆ ತುಷಿಮಾಮ ಕಡಿಯಾಳಿ ನೇತೃತ್ವದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಮಹಾ ಸಭಾ ಸಹಕಾರದೊಂದಿಗೆ ಶ್ರೀಕೃಷ್ಣನಿಗೆ ವಿಷ್ಣುಸಹಸ್ರ ನಾಮಾವಳಿ ಸಹಿತ ಕೋಟಿ ತುಳಸೀ ಅರ್ಚನೆಯಲ್ಲಿ ಆಶೀರ್ವಚನ ನೀಡಿದರು.
ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ತುಳಸೀಯಲ್ಲಿ ಲಕ್ಷಿ$್ಮ ಸನ್ನಿಧಾನವಿದೆ. ತುಳಸಿ ಅರ್ಚನೆಯಿಂದ ದೇವರು ಸಂಪ್ರೀತರಾಗುತ್ತಾರೆ. ಲಕ್ಷಿ$್ಮ ನಾರಾಯಣರನ್ನು ಒಟ್ಟಿಗೆ ಪೂಜೆಸಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ತುಷಿಮಾಮ ಕಡಿಯಾಳಿ ಅಧ್ಯಕ್ಷ ರಘುಪತಿ ಉಪಾಧ್ಯ, ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ, ಶ್ರೀಶ ಭಟ್ ಕಡೆಕಾರ್, ಅರವಿಂದ ಆಚಾರ್ಯ, ಪ್ರದಿಪ್ ಕುಮಾರ್ ಕಲ್ಕೂರ್, ವಿಷ್ಣು ಆಚಾರ್ಯ ಉಪಸ್ಥಿತರಿದ್ದರು.