ಕೃಷ್ಣ ಮಠದಲ್ಲಿ ಹೋಳಿ ಮೆರವಣಿಗೆ

udp-24-holi
Published on

ಉಡುಪಿ: ಹೋಳಿ ಹುಣ್ಣಿಮೆಯ ಪ್ರಯುಕ್ತ ಭಾನುವಾರ ಸಾಯಂಕಾಲ ಕೃಷ್ಣ ಮಠದಿಂದ ಕಡಿಯಾಳಿ ದೇವಸ್ಥಾನಕ್ಕೆ ಹೋಳಿ ಬಣ್ಣದ ಮೆರವಣಿಗೆ ನಡೆಯಿತು.

ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ದೇವರೆದುರು ಪ್ರಾರ್ಥಿಸಿ ನೀಡಿದ ಬಣ್ಣಗಳು ಹಾಗೂ ಅಷ್ಟ ಮಠಗಳಿಂದ ಪಡೆದ ಬಣ್ಣಗಳನ್ನು ಮಠದ ಪಾರುಪತ್ತೆಗಾರರು, ಕೊಟ್ಟಾರಿಗಳು, ವಿದ್ವಾಂಸರು ಮೆರವಣಿಗೆಯಲ್ಲಿ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಣ್ಣವನ್ನು ಪ್ರಸಾದ ರೂಪದಲ್ಲಿ ಕೃಷ್ಣ ಮಠಕ್ಕೆ ವಾಪಾಸು ತರಲಾಯಿತು. ರಾತ್ರಿ ಮಠದಲ್ಲಿ ನಿತ್ಯೋತ್ಸವದ ಬಳಿಕ ರಥಬೀದಿಯ ಕಟ್ಟೆಯಲ್ಲಿ ಮನ್ಮಥ ದಹನ ನಡೆದು, ಉಭಯ ಶ್ರೀಪಾದರು ಬಣ್ಣವನ್ನು ಹಚ್ಚಿಕೊಂಡು ಭಕ್ತರಿಗೆ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net