ಕೃಷ್ಣನಿಗೆ ಅರ್ಘ್ಯಪ್ರದಾನ

IMG-20210831-WA0023
Published on

ಉಡುಪಿ: ಶ್ರೀಕೃಷ್ಣ ಜಯಂತಿ ಅಂಗವಾಗಿ ಸೋಮವಾರ ರಾತ್ರಿ ಕೃಷ್ಣ ಮಠದ ಗರ್ಭಗುಡಿಯಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು  ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ಬಿಲ್ವಪತ್ರೆ ಅರ್ಪಿಸಿ, ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡಿದರು.


 ಶ್ರೀಪಾದರು ಚಂದ್ರೋದಯ ಸಮಯ 12.17ರ ಮುಹೂರ್ತದಲ್ಲಿ ತುಳಸಿಕಟ್ಟೆ ಬಳಿ ವಿಶೇಷ ಪೂಜೆ ನೆರವೇರಿಸಿ, ತೆಂಗಿನ ಹೋಳಿನಲ್ಲಿ ಸುದರ್ಶನ ಸಾಲಿಗ್ರಾಮವನ್ನಿಟ್ಟು  ಚಂದ್ರನಿಗೆ ಶಂಖದಿಂದ ಕ್ಷೀರಾರ್ಘ್ಯವನ್ನು ನೀಡಿದರು.


ಕೃಷ್ಣನ ಮುಂಭಾಗ ತೀರ್ಥ ಮಂಟಪದಲ್ಲಿ ವಿಶೇಷವಾಗಿ ಅಳವಡಿಸಿದ್ದ ಬೆಳ್ಳಿಯ ಮಂಟಪದಲ್ಲಿ ವಿದ್ವಾಂಸರು, ಮಠದ ಪರಿವಾರದವರು ಸರತಿ ಸಾಲಿನಲ್ಲಿ ಬಂದು ಕೃಷ್ಣಾರ್ಘ್ಯವನ್ನೂ, ತುಳಸಿಕಟ್ಟೆಯಲ್ಲಿ ಚಂದ್ರಾರ್ಘ್ಯವನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net