Gadag: ಗೌರಿ ಗಣೇಶ ಶಿಕ್ಷಣ ಸಂಸ್ಥೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಠಮಿ ಮತ್ತು ನಮ್ಮೂರವರು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಲೆಯ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷಭೂಷಣ ಧರಿಸಿದ್ದು ತುಂಬಾ ವಿಶೇಷವಾಗಿತ್ತು. ಚಿಕ್ಕ ಚಿಕ್ಕ ಮಕ್ಕಳಿಗೆ ಅವರ ಪಾಲಕರು ಕೃಷ್ಣ ಮತ್ತು ರಾಧೆಯ ವೇಷಭೂಷಣ ಅಲಂಕಾರ ಮಾಡಿದ್ದು ತುಂಬಾ ಸೌಂದರ್ಯದಿAದ ಕೊಡಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಶಿವರಾಜಕುಮಾರ ಗೊಂಡಬಾಳ ಮತ್ತು ಮುಖ್ಯ ಅತಿಥಿಗಳಾಗಿ ಇನ್ನೋರ್ವ ಸದಸ್ಯರಾದ ಬಸವರಾಜ ಕುಂದಗೋಳ ಹಾಗೂ ಮಂಜುಳಾ ರಜಪೂತ ಶಿಕ್ಷಕರು ವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಜಿ.ಎಮ್.ನೀಲವಾನಿ ನಿರೂಪಣೆ ಮಾಡಿದರು. ವಂದನಾರ್ಪಣೆಯನ್ನು ಎಸ್.ಎಸ್. ಗುಗ್ಗರಿ ಶಿಕ್ಷಕರು ನೇರವೇರಿಸಿಕೊಟ್ಟರು. ಕೆ. ಬಿ. ಮಾರನಬಸರಿ, ಎಸ್. ಎಮ್. ದೇವದರ, ಯು. ಕೆ. ಕೊಂಗಾರಿ, ಎಮ್. ಎಲ್. ಕೊಪ್ಪಳ ಮತ್ತು ಎಮ್. ಜಿ. ಬಡ್ನಿ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.