ರಾಮಕೃಷ್ಣ ಆಶ್ರಮದಲ್ಲಿ ಜನ್ಮಾಷ್ಟಮಿ

Published on

ಹುಬ್ಬಳ್ಳಿ: ಇಲ್ಲಿಯ ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆ. 26ರಂದು ಸಂಜೆ 4ಕ್ಕೆ ಮಕ್ಕಳಿಗಾಗಿ ಬಾಲ ಶ್ರೀಕೃಷ್ಣ ಹಾಗೂ ರಾಧೆಯರ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ.

ನಂತರ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಆಯೋಜಿಸಲಾಗಿದೆ. ಐದು ವರ್ಷದೊಳಗಿನ ಹಾಗೂ ಆರರಿಂದ 12 ವರ್ಷದೊಳಗಿನ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.

ಸ್ವಾಮಿ ರಘುವೀರಾನಂದ ಮಹಾರಾಜ್, ಸ್ವಾಮಿ ಬುದ್ಧಿಯೋಗಾನಂದ ಮಹಾರಾಜ್, ಸ್ವಾಮಿ ಗುರುದೇವಚರಣಾನಂದ ಮಹಾರಾಜ್, ಸ್ವಾಮಿ ತೇಜಸಾನಂದ ಮಹಾರಾಜ್ ಅವರು ಸಾನ್ನಿಧ್ಯ ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net