ಹುಬ್ಬಳ್ಳಿ: ಇಲ್ಲಿಯ ಸೇವಾ ಭಾರತಿ ಟ್ರಸ್ಟ್ ನ ವಿದ್ಯಾವಿಕಾಸ ಪ್ರಕಲ್ಪದ ಉಚಿತ ಮನೆಪಾಠ ಮತ್ತು ಸಂಸ್ಕಾರ ಕೇಂದ್ರಗಳ ಮಕ್ಕಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ. 25ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಳಗ್ಗೆ 10ಕ್ಕೆ ದೇಶಪಾಂಡೆನಗರದ ಶ್ರೀ ಕೃಷ್ಣ ಕಲ್ಯಾಣ ಮಂಟಪದಿಂದ ಶೋಭಾಯಾತ್ರೆ ಹೊರಡಲಿದ್ದು, ಮಕ್ಕಳು, ಶಿಕ್ಷಕಿಯರು, ಪಾಲಕರು ಸೇರಿ ಸುಮಾರು 300ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವರು. ಕರ್ನಾಟಕ ಜಿಮಖಾನಾ ಮೈದಾನಕ್ಕೆ ಯಾತ್ರೆ ಆಗಮಿಸಿದ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.
ಡಾ. ಚೈತನ್ಯ ಕುಲಕರ್ಣಿ, ಡಾ. ಶ್ರೀನಾಥ ಜೋಶಿ, ನಂದಿನಿ ಮಜೇಥಿಯಾ, ಶಿಲ್ಪಾ ಶೆಟ್ಟಿ, ಸುಭಾಸಸಿಂಗ್ ಜಮಾದಾರ, ವಿದ್ಯಾವಿಕಾಸ ಪ್ರಕಲ್ಪದ ಪ್ರಾಂತ ಸಮಿತಿ ಅಧ್ಯೆ ಭಾರತಿ ನಂದಕುಮಾರ, ಕಾರ್ಯದರ್ಶಿ ರಾಚಯ್ಯ ವಾರಿಕಲ್ಮಠ ಉಪಸ್ಥಿತರಿರುವರು.