

ಧಾರವಾಡ: ಸಾಧನಕೇರಿಯ ಬೇಂದ್ರೆ ಭವನದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಹಾಗೂ ಭರತ ನೃತ್ಯ ಅಕಾಡೆಮಿಯ ಸಹಯೋಗದಲ್ಲಿ ಆಗಸ್ಟ್ 16ರಂದು ಸಂಜೆ 5 ಗಂಟೆಗೆ ಕೃಷ್ಣ ಜನ್ಮಾಷ್ಠಮಿ ನೃತ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ನಟ, ನಿರ್ದೇಶಕ ಡಾ.ಶಶಿಧರ ನರೇಂದ್ರ ಉದ್ಘಾಟಿಸುವರು. ಅತಿಥಿಯಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ಮುಖ್ಯಸ್ಥ ವಿದ್ವಾನ್ ವಿನಾಯಕ ಭಟ್ ಶೇಡಿಮನೆ, ಹಿರಿಯ ವಯೋಲಿನ್ ವಾದಕ ಪಂ.ವಾದಿರಾಜ ನಿಂಬರಗಿ, ವಸವಿನ್ಯಾಸಕಿ ಮುಕ್ತಾ ವೆರ್ಣೇಕರ ಭಾಗವಹಿಸುವರು. ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯಕ್ಷತೆ ವಹಿಸುವರು. ನೃತ್ಯ ಗುರು ವಿದ್ವಾನ್ ರಾಜೇಂದ್ರ ಟೊಣಪಿ ಉಪಸ್ಥಿತರಿರುವರು.ನಂತರ ಭರತ ನೃತ್ಯ ಅಕಾಡೆಮಿ ವಿದ್ಯಾರ್ಥಿಗಳು ಕೃಷ್ಣನ ಕುರಿತು ವಿಶಿಷ್ಟ ನೃತ್ಯ ಪ್ರದರ್ಶಿಸುವರು ಎಂದು ಸೊಸೈಟಿ ಸಂಯೋಜಕ ಪ್ರಕಾಶ ಬಾಳಿಕಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.