

ಕಿಕ್ಕೇರಿ: ಗ್ರಾಮ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಆನೆಗೂಳ, ಗೋವಿಂದನಹಳ್ಳಿ ಗ್ರಾಮದಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಪೂಜಾಲಂಕಾರ ಮಾಡಲಾಗಿತ್ತು. ಗೋವಿಂದನಹಳ್ಳಿ ಗ್ರಾಮದಲ್ಲಿನ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ವಿವಿಧ ಅಭಿಷೇಕ ನೆರವೇರಿಸಿ ಪರಿಮಳ ಪುಷ್ಪಗಳಿಂದ ಸರ್ವಾಲಂಕಾರಗೊಳಿಸಲಾಗಿತ್ತು. ವಿಶೇಷ ಅಲಂಕಾರವನ್ನು ಕಣ್ತುಂಬಿಕೊಳ್ಳಲು ಹೋಬಳಿಯ ವಿವಿಧೆಡೆಯಿಂದ ಗ್ರಾಮಸ್ಥರು ಅಧಿಕವಾಗಿ ಆಗಮಿಸಿದ್ದರು. ಭಕ್ತರಿಗೆ ಲಡ್ಡು, ತೀರ್ಥ ಪ್ರಸಾದ ವಿತರಿಸಲಾಯಿತು.
ಅರ್ಚಕರಾದ ಗೋಪಾಲಸ್ವಾಮಿ, ಗೋಪಾಲಯ್ಯ, ರಮೇಶ್, ರಮಾನಂದ, ನರಸಿಂಹಮೂರ್ತಿ ಗೋಕುಲ ನಂದನಿಗೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಮಕ್ಕಳು ಕೃಷ್ಣ, ರಾಧೆ, ರುಕ್ಮಿಣಿಯ ವೇಷಭೂಷಣ ತೊಟ್ಟು ಸಂಭ್ರಮಿಸಿದರು.