

ಚಿಕ್ಕೋಡಿ: ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ವೇಷಭೂಷಣ ತೊಡುವುದರಿಂದ ಕ್ರಿಯಾಶೀಲರಾಗುತ್ತಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶಾಂಭವಿ ಅಶ್ವತ್ಥಪುರ ಹೇಳಿದರು.
ಪಟ್ಟಣದ ಕೇಶವ ಕಲಾಭವನದಲ್ಲಿ ಸಹಾರಾ ಸಂಸ್ಥೆಯ ಇಂಟನ್ಯಾಷನಲ್ ಬಚಪನ್ ಶಾಲೆಯು ಭಾನುವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಡಾ.ಸೀಮಾ ಟಿ.ಕೆ. ಮಾತನಾಡಿ, ಮಕ್ಕಳನ್ನು ಮೊಬೈಲ್‌ದಿಂದ ದೂರ ಇಡಬೇಕು ಎಂದರು.
ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ಶ್ರೀಕೃಷ್ಣ ನಾಟಕ ನಾಟಕವನ್ನು ಪ್ರದರ್ಶಿಸಿದರು. ಶಿಕ್ಷಕಿಯರಾದ ಅಕ್ಷತಾ ಲೋಕಣ್ಣವರ ಹಾಗೂ ಪ್ರತೀಕ್ಷಾ ಎಂಟತ್ತಿವನವರ, ಶಾಲೆಯ ಸಂಸ್ಥೆಯ ಸದಸ್ಯರಾದ ವಿನಾಯಕ ಜಾಧವ, ನಿರ್ದೇಶಕ ಬಾಬು ಸಮ್ಮತ್ತಶೆಟ್ಟಿ, ಶುಭಂಗಿ ಧಾಮನ್ನವರ, ರಾಜ ಜಾಧವ, ಶಿಕ್ಷಕಿ ಪ್ರಿಯಾಂಕ ಶಿಂಧೆ ಹಾಗೂ ಪ್ರೀತಿ ಶಿಂಧೆ, ನಿರ್ದೇಶಕ ವೇದ ಜಾಧವ, ಬಬಿನಾ ಮಾಳಿಗೆ ಇತರರಿದ್ದರು.