ವಾಸವಿ ಮಾಂಟೆಸ್ಸರಿ ಶಾಲೆಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

ಕೊಳ್ಳೇಗಾಲದ ವಾಸವಿ ಮಾಂಟೆಸ್ಸರಿ ಶಾಲೆ ಮಕ್ಕಳು  ಕೃಷ್ಣ ಮತ್ತು ರಾಧೆ ವೇಷ ತೊಟ್ಟು ಗಮನ ಸೆಳೆದರು. ಡಾ.ಪಿ.ಜಿ ಶ್ರೀಧರ್, ವೆಂಕಟೇಶ್‌ಬಾಬು, ಸುಮಂತ್ ವಿ.ಅಚ್ಚಮ್, ಭಾವನಾ, ಸ್ವಪ್ನಾ, ರವಿಕುಮಾರ್, ವಾಸವಾಂಬ, ಬಿ.ಎಸ್.ಗೀತಾ, ಪೂರ್ಣಿಮಾ ಇದ್ದರು.
ಕೊಳ್ಳೇಗಾಲದ ವಾಸವಿ ಮಾಂಟೆಸ್ಸರಿ ಶಾಲೆ ಮಕ್ಕಳು ಕೃಷ್ಣ ಮತ್ತು ರಾಧೆ ವೇಷ ತೊಟ್ಟು ಗಮನ ಸೆಳೆದರು. ಡಾ.ಪಿ.ಜಿ ಶ್ರೀಧರ್, ವೆಂಕಟೇಶ್‌ಬಾಬು, ಸುಮಂತ್ ವಿ.ಅಚ್ಚಮ್, ಭಾವನಾ, ಸ್ವಪ್ನಾ, ರವಿಕುಮಾರ್, ವಾಸವಾಂಬ, ಬಿ.ಎಸ್.ಗೀತಾ, ಪೂರ್ಣಿಮಾ ಇದ್ದರು.
Published on

ಕೊಳ್ಳೇಗಾಲ: ಪಟ್ಟಣದ ವಾಸವಿ ಮಾಂಟೆಸ್ಸರಿ ಶಾಲೆಯಲ್ಲಿ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ಶಾಲೆಯನ್ನು ಆಕರ್ಷಣೀಯವಾಗಿ ಅಲಂಕೃತಗೊಳಿಸಿದ್ದು ವಿಶೇಷವಾಗಿತ್ತು. ಹೆಣ್ಣು ಮಕ್ಕಳು ರಾಧೆಯ ರೀತಿ ಮತ್ತು ಗಂಡು ಮಕ್ಕಳು ಶ್ರೀಕೃಷ್ಣನ ವೇಷಧಾರಿಗಳಾಗಿ ಶಾಲೆಗೆ ಆಗಮಿಸಿ ಗಮನ ಸೆಳೆದರು. ವಿಷ್ಣುವಿನ ಹತ್ತು ಅವತಾರಗಳಾದ ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಮತ್ತು ಕಲ್ಕಿ ಅವತಾರದಲ್ಲಿ ಬಂದಿದ್ದು ವಿಶೇಷವಾಗಿತ್ತು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿದ್ಯಾಸಂಸ್ಥೆ ಅಧ್ಯಕ್ಷ ಎ.ಡಿ.ಕುಮಾರಕೃಷ್ಣ, ಕಾರ್ಯದರ್ಶಿ ಡಾ.ಪಿ.ಜಿ ಶ್ರೀಧರ್, ಜಂಟಿ ಕಾರ್ಯದರ್ಶಿ ವೆಂಕಟೇಶ್ ಬಾಬು, ಖಂಜಾಚಿ ಸುಮಂತ್ ವಿ.ಅಚ್ಚಮ್, ಸಂಯೋಜಕರಾದ ಭಾವನಾ, ಸ್ವಪ್ನಾ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರವಿಕುಮಾರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಾಸವಾಂಬ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಬಿ.ಎಸ್.ಗೀತಾ, ಶ್ರೀ ವಾಸವಿ ಮಾಂಟೆಸ್ಸರಿ ಎಚ್‌ಒಡಿ ಪೂರ್ಣಿಮಾ, ಶಿಕ್ಷಕರಾದ ಪರಿಪೂರ್ಣ, ರಶ್ಮಿ, ಮೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net