ಪಿವಿಎಸ್ ಕಲಾಕುಂಜದ ಶ್ರೀಕೃಷ್ಣ ಬಲರಾಮ ಮಂದಿರದಲ್ಲಿ ಆ.18 ಮತ್ತು 19ರಂದು ಜನ್ಮಾಷ್ಟಮಿ ಸಂಭ್ರಮ

20220816_130826
Published on

ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನ ಪಿವಿಎಸ್ ಕಲಾಕುಂಜದ ಶ್ರೀ ಶ್ರೀಕೃಷ್ಣ ಬಲರಾಮ ಮಂದಿರದಲ್ಲಿ ಇಸ್ಕಾನ್ ಮಂಗಳೂರು ವತಿಯಿಂದ ಆ.18 ಮತ್ತು 19ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಜರುಗಲಿದೆ.
ಆ.18ರಂದು ಬೆಳಗ್ಗೆ 7ಕ್ಕೆ ಶೃಂಗಾರ ಆರತಿ, 8ಕ್ಕೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, 9ಕ್ಕೆ ತೊಟ್ಟಿಲು ಸೇವೆ, ಮಧ್ಯಾಹ್ನ 12ಕ್ಕೆ ರಾಜಭೋಗ ಆರತಿ, ಸಂಜೆ 4ಕ್ಕೆ ಭಜನೆ, 6ಕ್ಕೆ ಅಭಿಷೇಕ, ರಾತ್ರಿ 8.15ಕ್ಕೆ ಮಹಾಪೂಜೆ ನಡೆಯಲಿದೆ. ಆ.19ರಂದು ಬೆಳಗ್ಗೆ 7ಕ್ಕೆ ಶೃಂಗಾರ ಆರತಿ, 8ಕ್ಕೆ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, 9ಕ್ಕೆ ತೊಟ್ಟಿಲು ಸೇವೆ, ಮಧ್ಯಾಹ್ನ 12ಕ್ಕೆ ರಾಜಭೋಗ ಆರತಿ, ಸಂಜೆ 4ಕ್ಕೆ ಭಜನೆ, ಮಧ್ಯರಾತ್ರಿ 12ಕ್ಕೆ ಮಹಾಮಂಗಳಾರತಿ ನೆರವೇರಲಿದೆ ಎಂದು ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮ ದಾಸ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 9ರಿಂದ ರಾತ್ರಿ12ರವರೆಗೆ ಪ್ರಸಾದ ವಿತರಣೆ ನಡೆಯಲಿದೆ. ಪುರಾಣ ಮತ್ತು ಸಂಸ್ಕೃತಿಗೆ ಸಂಬಂಧಿಸಿ ರಸಪ್ರಶ್ನೆ ಮಾದರಿಯ ಪಝಲ್ ಕಾರ್ನರ್ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದ್ದೂರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಾರ್ವಜನಿಕರಿಗೆ ನೆಮ್ಮದಿ, ಸಂತಸ, ಹೊಸ ಹುರುಪು, ಚೈತನ್ಯ ನೀಡಲಿದ್ದು, ಶ್ರೀಕೃಷ್ಣ ಬಲರಾಮರ ವಿಶಿಷ್ಟ ರೀತಿಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸದವಕಾಶ ಸೃಷ್ಟಿಸಲಾಗಿದೆ. ಭಕ್ತರು ಹೂ, ಹಣ್ಣು, ತೆಂಗಿನಕಾಯಿ, ತುಳಸಿ ಅರ್ಪಿಸಲು ಅವಕಾಶವಿದೆ. ಎರಡು ದಿನಗಳ ಅವಧಿಯಲ್ಲಿ ಒಟ್ಟು 10 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಜನ್ಮಾಷ್ಟಮಿ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ವಿಜೇತರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಗುವುದು ಎಂದರು.
ಇಸ್ಕಾನ್ ಮಂಗಳೂರು ಕಾರ್ಯದರ್ಶಿ ಸನಂದನ ದಾಸ, ರಾಧಾಜೀವನ ದಾಸ, ಎಂ.ವಿ.ಮಲ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net