ಮಕ್ಕಳಿಗೆ ಸಂಸ್ಕೃತಿಯನ್ನು ಪರಿಚಯಿಸಿ: ವ್ಯವಸ್ಥಾಪಕ ನಿರ್ದೇಶಕ ವಿ.ನಂಜುಂಡಯ್ಯ ಕಿವಿಮಾತು

1 (2)
Published on

ಮಂಡ್ಯ: ಶ್ರೀಕೃಷ್ಣನ ವೃತ್ತಾಂತ ತಿಳಿಸಲು ಮಕ್ಕಳಿಗೆ ಸ್ಪರ್ಧೆ ಅವಶ್ಯಕ. ಅಂತೆಯೇ ಮಕ್ಕಳಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂದು ಆಕೃತಿ ಅಕ್ಷರ ಎಜುಕೇಷನ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ವಿ.ನಂಜುಂಡಯ್ಯ ತಿಳಿಸಿದರು.

ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಗಾಂಧಿಭವನದಲ್ಲಿ ಆಕೃತಿ ಮಾಂಟೆಸ್ಸರಿ ಶಾಲೆಯಿಂದ ಬುಧವಾರ ಆಯೋಜಿಸಿದ್ದ ಶ್ರೀಕೃಷ್ಣ ವೇಷ ಧರಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನದ ಬಗ್ಗೆ ಅರಿವು ಮೂಡಲಿಸಲು, ಅದಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನು ಮಕ್ಕಳಿಂದಲೇ ಅಯೋಜಿಸಿರುವ ಗಮನಾರ್ಹ ಎಂದರು.

ಈ ಸ್ಪರ್ಧೆಯಲ್ಲಿ ಮಕ್ಕಳು, ಪರಿಸರ, ಋತುಗಳು, ಪ್ರಾಣಿ, ರಸ್ತೆ, ಸುರಕ್ಷತೆ, ಗಾಳಿ, ಮಳೆ, ಬಿಸಿಲು, ಕಾರ್ಖಾನೆಗಳಿಂದಾಗುವ ಅನುಕೂಲ, ಅನಾನುಕೂಲ ತೀವ್ರತೆಗಳ ಬಗ್ಗೆ ಮಕ್ಕಳು ತಿಳಿದುಕೊಂಡು ಪರಿಚಯಿಸಲಾಗುತ್ತಿದೆ. ಇದು ಅವರ ಮುಂದಿನ ವಿದ್ಯಾರ್ಜನೆ, ಅಭಿರುಚಿ ಮತ್ತು ಕಲಿಕಾ ಯತ್ನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಶಿಕ್ಷಕಿಯರಾದ ಅನ್ನಪೂರ್ಣ, ಯೋಗೀತಾ, ಹೊನುಶ್ರೀ, ಪ್ರೇಮಾ, ಅಶ್ವಿನಿ, ಧ್ವನಿ, ಚಂದನ್, ಮೋನಿಕಾ, ಭಾಗ್ಯಮ್ಮ ಹಾಗೂ ನೆಲದನಿ ಬಳಗದ ನವೀನಕುಮಾರಿ ಲೋಕೇಶ್, ಸುನೀತಾ, ವಿಭಾನಿಧಿ ಶಿವ, ಸುಬ್ರಮಣ್ಯ, ಲಂಕೇಶ್ ಮಂಗಲ ಇದ್ದರು.

ಇದೇ ವೇಳೆ ಮಕ್ಕಳು ಶ್ರೀಕೃಷ್ಣ, ರಾಧೆ, ರುಕ್ಮಿಣಿ, ವೀರ ಪುರುಷರು ಹಾಗೂ ವನಿತೆಯರ ವೇಷ ಭೂಷಣ ತೊಟ್ಟು ಸ್ಪರ್ಧೆಯಲ್ಲಿ ಭಾಗವಹಿಸಿದರು. ವಿಜೇತರಿಗೆ ಸಂಸ್ಥೆ ಕಾರ್ಯದರ್ಶಿ ಅನಿತಾ ಹರೀಶ್, ರಕ್ಷಿತ್, ಪ್ರಮೋದಮಣಿ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net