

ನ್ಯಾಮತಿ: ಸತ್ಯ, ಧರ್ಮ ರಕ್ಷಣೆಯೇ ಮೊದಲ ಆದ್ಯತೆಯಾಗಬೇಕೆಂದು ಶ್ರೀಕೃಷ್ಣ ಸಾರಿದ್ದು, ಈ ಸಂದೇಶವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಪಾಲಿಸಬೇಕು ಎಂದು ಬಸವೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಿ. ಸುರೇಶ್ ಹೇಳಿದರು.
ತಾಲೂಕಿನ ಜೀನಹಳ್ಳಿಯ ಕತ್ತಿಗೆ ಕ್ರಾಸ್ ಬಳಿಯಿರುವ ಬಸವೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಗುರುವಾರ ಆಯೋಜಿಸಲಾಗಿದ್ದ ವಿವಿಧ ಶಾಲೆ ವಿದ್ಯಾರ್ಥಿಗಳ ಕೃಷ್ಣ ವೇಷಭೂಷಣ ಸ್ಪರ್ಧೆ ಮತ್ತು ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ಸಮಾರಂಭವನ್ನು ಮುಖ್ಯಶಿಕ್ಷಕಿ ಜಾಕ್ಸಮ್ಮ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಆರುಂಡಿ, ಜೀನಹಳ್ಳಿ, ಗುಡ್ಡೇಹಳ್ಳಿ, ಕೆಂಚಿಕೊಪ್ಪ, ಹೊನ್ನಾಳಿ ತಾಲೂಕಿನ ಕತ್ತಿಗೆ, ಮಾದೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಶಾಲೆಗಳ ಅಂಗನವಾಡಿ ಮಕ್ಕಳು ಶ್ರೀಕೃಷ್ಣ ರುಕ್ಮಿಣಿ ವೇಷ ಧರಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ತೀರ್ಪುಗಾರರಾಗಿ ಪತ್ರಕರ್ತ ಎಂ.ಎಸ್. ಶಾಸ್ತ್ರೀ ಹೊಳೆಮಠ್, ಕತ್ತಿಗಿ ಪ್ರೌಢಶಾಲೆ ಶಿಕ್ಷಕಿ ಪ್ರೇಮಬಾಯಿ, ಜೀನಹಳ್ಳಿ ಪ್ರೌಢಶಾಲೆ ಕೆ. ಶಿವಮ್ಮ ಕಾರ್ಯನಿರ್ವಹಿಸಿದರು.
ಪತ್ರಕರ್ತರಾದ ಸದಾಶಿವಯ್ಯ, ಜಿ.ಎಚ್. ರಾಜು, ಮೃತ್ಯುಂಜಯ ಪಾಟೀಲ್, ಶಿಕ್ಷಕರಾದ ಕಲ್ಪನಾ, ಲೋಕೇಶ್, ಚೇತನ್, ಕುಮಾರ್, ಮಕ್ಕಳ ಪೋಷಕರು ಇದ್ದರು.