ಫಯಾಜ್ ಖಾನ್‌ಗೆ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ

b9cd8faa-ca0c-4371-bf70-bfa2bbc085ce
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸಂಗೀತ ವಿದ್ಯಾಲಯ, ದಾಸಾ ಟ್ರಸ್ಟ್ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಜೂ. ೨ರಂದು ಸಂಜೆ ೫.೧೫ಕ್ಕೆ ಆಯೋಜಿಸಿರುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಉಸ್ತಾದ್ ಫಯಾಜ್ ಖಾನ್ ಅವರಿಗೆ ಕೃಷ್ಣಾ ಹಾನಗಲ್ ರಾಷ್ಟಿçÃಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿದ್ಯಾಲಯದ ಕಾರ್ಯದರ್ಶಿ ವಿನಯ ನಾಯಕ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತೋತ್ಸವಕ್ಕೆ ಯುವ ಪ್ರತಿಭೆ ಧ್ರುವ ಅಜಯ ಹಾನಗಲ್ ಅವರ ಬಾನ್ಸುರಿ ವಾದನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ನಂತರ ಏರ್ಪಡಿಸಿರುವ ಸಮÁರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು -Àಯಾಜ್ ಖಾನ್ ಅವರಿಗೆ ಪ್ರಶಸ್ತಿ ಪ್ರದಾನ ಮÁಡುವರು. -Àಯಾಜ್ ಖಾನ್ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಪಂ. ಭರತ ಕಾಮತ ಹಾಗೂ ಡಾ. ಉದಯ ಕುಲಕರ್ಣಿ ತಬಲಾ ಹಾಗೂ ಸರ್ಫರಾಜ್ ಖಾನ್ ಸಾರಂಗಿ ವಾದನ ಸಾಥ್ ನೀಡಲಿದ್ದಾರೆ ಎಂದರು.
-ÀಯÁಜ್ ಖಾನ್ ಬಹುಮುಖ ಪ್ರತಿಭೆಯಾಗಿದ್ದು, ಸಾರಂಗಿ, ತಬಲಾ ಹಾಗೂ ಸಿತಾರ ವಾದನಗಳಲ್ಲೂ ಪರಿಣಿತರು. ಠುಮರಿ, ತರಾನಾ, ಗಝಲ್, ದಾಸರಪದ, ವಚನ ಪ್ರಕಾರ ಪ್ರಸ್ತುತಪಡಿಸುವಲ್ಲಿ ನಿಸ್ಸೀಮರು. ೧೯೬೮ರಲ್ಲಿ ಜನಿಸಿದ ಫಯಾಜ್‌ಖಾನ್ ಅವರದ್ದು ಸಂಗೀತಗಾರರ ಮನೆತನ. ತಂದೆ ಉ. ಅಬ್ದುಲ್ ಖಾದರ್ ಖಾನ್ ಕಿರಾಣಾ ಘರಾಣೆಯ ಪ್ರಸಿದ್ಧ ಸಾರಂಗಿ ವಾದಕರು. ಹೀಗಾಗಿ ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಒಲವು ಹೆಚ್ಚಿತ್ತು. ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಅವರು, ಆಕಾಶವಾಣಿಯ ಉಚ್ಚ ಶ್ರೇಣಿಯ ಕಲಾವಿದರಾಗಿ, ದಕ್ಷಿಣ ಭಾರತದ ಹಲವು ಚಲನಚಿತ್ರ, ಧಾರಾವಾಹಿಗಳಿಗೆ ಹಿನ್ನೆಲೆ ಗಾಯನ ಹಾಗೂ ಸಾರಂಗಿ ವಾದನದ ಸಾಥ್‌ನೊಂದಿಗೆ ಸುಪ್ರಸಿದ್ಧ ಸಂಗೀತ ನಿರ್ದೇಶಕರೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ ಎಂದರು.
ಶಫೀಕ್ ಖಾನ್, ಪ್ರವೀಣ ಹೂಗಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net