

ಕಂಪಲಾಪುರ: ಇಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಕೃಷ್ಣೇಗೌಡ ಹಾಗೂ ಉಪಾಧ್ಯಕ್ಷರಾಗಿ ಸುನಂದಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಗೆ ನ.24 ರಂದು ಚುನಾವಣೆ ನಡೆದು ಜೆಡಿಎಸ್ ಬೆಂಬಲಿತ 7, ಕಾಂಗ್ರೆಸ್ ಬೆಂಬಲಿತ 3 ಜನ ಆಯ್ಕೆಯಾಗಿದ್ದರು.
ಅಧ್ಯಕ್ಷ ,ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಮಧ್ಯಾಹ್ನ 2 ಗಂಟೆಗೆ ಚುನಾವಣೆ ನಿಗದಿಯಾಗಿತ್ತು. ಅಧಕ-ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿದ್ದರಿಂದ ಚುನಾವಣಾಧಿಕಾರಿ ಜೆ.ಹಿತೇಂದ್ರ ಅವಿರೋಧ ಆಯ್ಕೆ ಘೋಷಿಸಿದರು.
ಪಿರಿಯಾಪಟ್ಟಣ ಟಿಎಪಿಸಿಎಂಎಸ್ ನಿರ್ದೇಶಕ ಕೆ.ಕುಮಾರ್, ಮಾಜಿ ಅಧ್ಯಕ್ಷ ಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್.ಸಂತೋಷ್, ನಿರ್ದೇಶಕ ಕೆ.ಎಂ.ಲಕ್ಷ್ಮಣ್, ಗಿರೀಶ್, ರವಿ , ಸಿಇಒ ಕಿಶೋರ್, ಮಾಜಿ ಅಧ್ಯಕ್ಷ ಕಟ್ಟೆ ಜಯಣ್ಣ , ರಿಜ್ವಾನ್, ಪಾಪಣ್ಣ , ಡೇರಿ ನಿರ್ದೇಶಕರಾದ ಕರೀಗೌಡ, ಗಣೇಶ್, ಕೆ.ಕೆ.ರವಿ, ರಾಮಕೃಷ್ಣ ,ನಜೀಬ್, ಸಿಬ್ಬಂದಿ ರೇವಣ್ಣ, ಮಂಜು ಇದ್ದರು.