ಅಧ್ಯಾತ್ಮ ಜ್ಞಾನ ಗಳಿಕೆಗೆ ಸಂಚಾರ ಸೌಕರ್ಯ

UDP Putthige Shree
ಉಡುಪಿ ಶ್ರೀಕೃಷ್ಣ ಮಠದಲ್ಲಿ 'ಕೃಷ್ಣ ಗೀತಾ ಟೂರ್ಸ್​'ನ ಶಾಖೆಯನ್ನು ಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಸುಶೀಂದ್ರ ತೀರ್ಥ ಶ್ರೀಪಾದರು, ಬಿ.ಆರ್​. ಶೆಟ್ಟಿ, ಕಿರಣ್​, ರತೀಶ್​ ಭಾರ್ಗವ್​ ಇತರರಿದ್ದರು.
Published on

ಪುತ್ತಿಗೆ ಸುಗುಣೇಂದ್ರ ಶ್ರೀ ಮಾಹಿತಿ | 'ಕೃಷ್ಣ ಗೀತಾ ಟೂರ್ಸ್​' ಶಾಖೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಚತುರ್ಥ ಕೋಟಿ ವಿಶ್ವಗೀತಾ ಪರ್ಯಾಯದ ಸುಸಂದರ್ಭದಲ್ಲಿ ಉಡುಪಿಯ ಶ್ರೀಕೃಷ್ಣನ ಸನ್ನಿಧಾನದಲ್ಲಿ 'ಕೃಷ್ಣ ಗೀತಾ ಟೂರ್ಸ್​' ಎಂಬ ಹೊಸ ಸೇವೆ ಆರಂಭಿಸಲಾಗಿದೆ ಎಂದು ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಮಾಹಿತಿ ನೀಡಿದರು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಾನುವಾರ 'ಕೃಷ್ಣ ಗೀತಾ ಟೂರ್ಸ್​'ನ ಶಾಖೆ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇಲ್ಲಿಗೆ ಬರುವ ಯಾತ್ರಿಕರಿಗೆ ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಧಾರ್ಮಿಕ ಕ್ಷೇತ್ರಗಳ ಸಂದರ್ಶನಕ್ಕೆ ಅನುಕೂಲ ಕಲ್ಪಿಸಿಕೊಡುವುದು ಪ್ರಮುಖ ಉದ್ದೇವಾಗಿದೆ ಎಂದರು.

ಇದು ಪಿಕ್​ನಿಕ್​ ಅಲ್ಲ

ಇದು ಧಾರ್ಮಿಕ ಮತ್ತು ಅಧ್ಯಾತ್ಮಕ್ಕೆ ಸಂಬಂಧಿಸಿದ ಜ್ಞಾನ ಗಳಿಸಲು ಮಾಡುವ ಸಂಚಾರವಾಗಿದೆಯೇ ಹೊರತು ಪಿಕ್​ನಿಕ್​ ಅಲ್ಲ. ಧಾರ್ಮಿಕ ತಾಣಗಳಿಗೆ ತೆರಳಲು ಬೇಕಾಗುವ ವಾಹನ, ವಸತಿ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವ ಸೇವಾ ಕೌಂಟರ್​ ಇದಾಗಿದೆ. ಉಡುಪಿಯ ಗೀತಾ ಮಂದಿರದಲ್ಲಿ ಇದರ ಪ್ರಧಾನ ಕಾರ್ಯಾಲಯವಿದ್ದು, ಕೃಷ್ಣ ಮಠದಲ್ಲೂ ಶಾಖೆ ತೆರೆಯಲಾಗಿದೆ. ಅಪೇಕ್ಷಿತರು ಮೊ.ನಂ. 8055338811 ಸಂಪರ್ಕಿಸಬಹುದು ಎಂದು ಪುತ್ತಿಗೆ ಶ್ರೀ ತಿಳಿಸಿದರು.

ಮಠದ ಕಿರಿಯ ಸ್ವಾಮೀಜಿ ಸುಶೀಂದ್ರ ತೀರ್ಥ ಶ್ರೀಪಾದರು, ಮುಂಬಯಿಯ ಬಿ.ಆರ್​. ಶೆಟ್ಟಿ, ಕಿರಣ್​, ರತೀಶ್​ ಭಾರ್ಗವ್​ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net